ಹೊಸದುರ್ಗ: ತಾಲ್ಲೂಕಿನ ಮಾಡದಕೆರೆ ಹೋಬಳಿಯ ಅತ್ತಿಮಗ್ಗೆಯಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಯುಗಾದಿ ಹಬ್ಬದ ಚಂದ್ರ ದರ್ಶನದ ನಂತರ ರಾಮ ದೇವರ ಫೋಟೊ ಹಿಡಿದುಕೊಂಡು ಮನೆ, ಮನೆಗೂ ಹೋಗಿ ಪೂಜೆ ಮಾಡಿಸಲಾಗುತ್ತದೆ. ಹೀಗೆ 9 ದಿನ ವಿಶೇಷ ಪೂಜಾ ಕೈಂಕರ್ಯಗಳು ನಡೆದಿವೆ. ರಾಮನವಮಿಯ ಅಂಗವಾಗಿ ಶುಕ್ರವಾರ ಮಹಾಮಂಗಳಾರತಿ ನಂತರ ಪಾನಕ ಕೋಸಂಬರಿ ವಿತರಿಸಲಾಯಿತು ಎಂದು ಈಶ್ವರ್ ಭಂಡಾರಿ ಹೇಳಿದರು.

ಶನಿವಾರ ನಸುಕಿನಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಿತು. ನಂತರ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ದೇವಾಲಯದಿಂದ ತಂದು, ಸಕಲ ವಾದ್ಯಗೋಷ್ಠಿಗಳ ಸಮ್ಮುಖದಲ್ಲಿ ಸ್ವಾಮಿಯನ್ನು ರಥದಲ್ಲಿ ಇರಿಸಲಾಯಿತು. ಜೈ ಶ್ರೀರಾಮ್, ಜೈ ಭಜರಂಗಿ ಜೈಕಾರಗಳ ನಡುವೆ, ರಥವನ್ನು ದೇವಾಲಯದಿಂದ ಅರಳಿಮರದವರೆಗೂ ಎಳೆಯಲಾಯಿತು. ಭಕ್ತರು ಬಾಳೆಹಣ್ಣು ಸಮರ್ಪಿಸಿ, ಪ್ರಾರ್ಥಿಸಿದರು.

ಸಂಜೆ ಓಕಳಿ ಕಾರ್ಯಕ್ರಮದ ನಂತರ ರಥೋತ್ಸವಕ್ಕೆ ತೆರೆ ಎಳೆಯಲಾಯಿತು. ಮಸಣೀಹಳ್ಳಿ, ಅತ್ತಿಮಗ್ಗೆ, ಹೊಸದುರ್ಗ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-44-142196752

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.