ಹಿರಿಯೂರು: ‘ತಾಲ್ಲೂಕಿನ ಬಬ್ಬೂರು ಫಾರಂನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಾರ್ಚ್ 26 ಮತ್ತು 27ರಂದು ರಾಜ್ಯ ವಲಯ ಯೋಜನೆಯ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕುರಿತು ಸಾಂಸ್ಥಿಕ ತರಬೇತಿ ಕಾರ್ಯಾಗಾರ ಹಾಗೂ ದೇಸಿ ತಳಿಗಳ ವೈವಿಧ್ಯತೆಯ ಪ್ರದರ್ಶನ ನಡೆಯಲಿದೆ’ ಎಂದು ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ್ ತಿಳಿಸಿದ್ದಾರೆ.

‘ತರಬೇತಿಯಲ್ಲಿ ಕೃಷಿ ಮತ್ತು ತರಕಾರಿ ಬೆಳೆಗಳಲ್ಲಿ ದೇಸಿ ತಳಿಗಳ ಸಂರಕ್ಷಣೆಯ ಪ್ರಾಮುಖ್ಯತೆ’ ಕುರಿತು ಬೆಂಗಳೂರಿನ ಜಿಕೆವಿಕೆಯ ನಿವೃತ್ತ ಅನುವಂಶೀಯತೆ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಜ್ಞಾನದ ಪ್ರಾಧ್ಯಾಪಕ ಮೋಹನ್ ರಾವ್ ರೈತರಿಗೆ ಮಾಹಿತಿ ನೀಡುವರು. ಭತ್ತದಲ್ಲಿ ಸಾಂಪ್ರದಾಯಿಕ ತಳಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಕತ್ತಲಗೆರೆ ಕೃಷಿ ಸಂಶೋಧನೆ ಕೇಂದ್ರದ ಸಹಾಯಕ ಪ್ರಾಧ್ಯಾಪಕ ನಿರಂಜನ್, ಸಿರಿಧಾನ್ಯಗಳ ತಳಿ ವೈವಿಧ್ಯತೆ ಹಾಗೂ ಕೃಷಿ ಪದ್ಧತಿಗಳ ಕುರಿತು ಬಬ್ಬೂರು ಫಾರಂನ ಸಹಾಯಕ ಪ್ರಾಧ್ಯಾಪಕರಾದ ಸಿ.ನಂದಿನಿ ರೈತರಿಗೆ ಮಾಹಿತಿ ನೀಡುವರು’ ಎಂದು ಹೇಳಿದ್ದಾರೆ.

‘ವಿವಿಧ ತರಕಾರಿ ಬೆಳೆಗಳಲ್ಲಿ ಸಂರಕ್ಷಣೆ ಮಾಡುತ್ತಿರುವ ದೇಸಿ ಬಿತ್ತನೆ ಬೀಜಗಳು ಹಾಗೂ ಕೃಷಿ ಪದ್ಧತಿಗಳ ಬಗ್ಗೆ ಸಹಜ ಸಮೃದ್ಧ ಸಂಸ್ಥೆಯ ಸಿ.ಎಸ್. ಕೇಶವಮೂರ್ತಿ ಮಾಹಿತಿ ನೀಡಲಿದ್ದು, ಮೈಸೂರಿನ ಸಹಜ ಸೀಡ್ಸ್ ಕಂಪನಿಯವರು ವಿವಿಧ ಬೆಳೆಗಳಲ್ಲಿ ಲಭ್ಯವಿರುವ ದೇಸಿ ತಳಿಗಳ ಬಿತ್ತನೆ ಬೀಜಗಳ ವಸ್ತು ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲೆಯ ಆಸಕ್ತ 50 ರೈತರಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಮೊಬೈಲ್ ಸಂಖ್ಯೆ 8277931058ಗೆ ಮೊದಲು ಕರೆ ಮಾಡಿ ನೋಂದಾಯಿಸಿಕೊಳ್ಳುವವರನ್ನು ತರಬೇತಿಗೆ ಪರಿಗಣಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ತರಬೇತಿಯಲ್ಲಿ ಪಾಲ್ಗೊಳ್ಳುವ ರೈತರಿಗೆ ವಿವಿಧ ದೇಸಿ ತಳಿಗಳ ತರಕಾರಿ ಬೀಜಗಳ ಕಿಟ್ ವಿತರಿಸಲಾಗುವುದು’ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-44-1429566338

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.