ಸೋಮವಾರ, ಮೇ 17, 2021
23 °C

ತೊರೆ ಓಬೇನಹಳ್ಳಿ ಬ್ಯಾರೇಜ್ ಭರ್ತಿ: ಬಾಗಿನ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೊರೆಓಬೇನಹಳ್ಳಿ (ಧರ್ಮಪುರ): ವಾಣಿವಿಲಾಸ ಸಾಗರದಿಂದ ವೇದಾವತಿ ನದಿಗೆ ನೀರು ಬಿಟ್ಟಿರುವುದರಿಂದ ಇಲ್ಲಿನ ಬ್ಯಾರೇಜ್ ತುಂಬಿದ್ದು, ಗ್ರಾಮಸ್ಥರು ಮತ್ತು ಕರ್ನಾಟಕ ರಾಜ್ಯ ರೈತ ಸಂಘದವರು ಭಾನುವಾರ ಬಾಗಿನ ಅರ್ಪಿಸಿ ಸಂತಸ ಹಂಚಿಕೊಂಡರು.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ‘ವೇದಾವತಿ ನದಿ ಪಾತ್ರದಲ್ಲಿ ವಾಣಿವಿಲಾಸ ಸಾಗರದ ನೀರು ಹರಿಸಿದ್ದರಿಂದ ಈ ಭಾಗದ ಜನ–ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ತಾತ್ಕಾಲಿಕವಾಗಿ ನೀಗಿಸಿದಂತೆ ಆಗಿದೆ. ನದಿಯಲ್ಲಿ ನೀರು ಹರಿಯುವುದರಿಂದ ಧರ್ಮಪುರ ಹೋಬಳಿಯ ಬಹುತೇಕ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಹೆಚ್ಚಲಿದೆ. ತೆಂಗು, ಅಡಿಕೆ, ಬಾಳೆ, ದಾಳಿಂಬೆ, ಪಪ್ಪಾಯ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗಲಿದೆ’ ಎಂದರು.

ಈ ಸಂದರ್ಭದಲ್ಲಿ ಬ್ಯಾಡರಹಳ್ಳಿ ಶಿವಕುಮಾರ್, ಚೇತನ್, ರವೀಶ್, ತಿಪ್ಪೇಸ್ವಾಮಿ, ರಾಘವೇಂದ್ರ, ರಂಗೇಗೌಡ, ಹಿಮಂತ್ ರಾಜ್, ರಂಗಸ್ವಾಮಿ, ಗೌಡ, ಹನುಮಂತರಾಯ, ಮಂಜುನಾಥ್, ಜೀವಿತಾ, ಸುನೀತಾ, ರಂಗಮ್ಮ ಅವರೂ ಈ ಸಂದರ್ಭದಲ್ಲಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು