ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

Last Updated 19 ಮೇ 2022, 3:05 IST
ಅಕ್ಷರ ಗಾತ್ರ

ಭರಮಸಾಗರ: ಹೋಬಳಿಯ ಬಸವನಶಿವನಕೆರೆ, ಬೇಡರಶಿವನಕೆರೆ, ಕಬ್ಬಿಗೆರೆ ಗ್ರಾಮದ ಜಮೀನುಗಳ ಬಳಿ ಈಚೆಗೆ ಕರಡಿಯೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ.

ಮುಂಗಾರು ಪೂರ್ವ ಮಳೆಯಾಗಿರುವ ಕಾರಣ ಅನೇಕ ರೈತರು ಹೊಲಗಳಲ್ಲಿ ಹತ್ತಿ, ಶೇಂಗಾ ಬಿತ್ತನೆ ಮಾಡಿದ್ದಾರೆ.

ಕೆಲವರು ತರಕಾರಿ ಬೆಳೆಯುತ್ತಿದ್ದಾರೆ. ಜೊತೆಗೆ ಮುಂಗಾರು ಆರಂಭವಾಗುತ್ತಿರುವುದರಿಂದ ಭೂಮಿ ಹಸನು ಮಾಡುವ ಕಾರ್ಯ ಸೇರಿ
ವಿವಿಧ ಕಾರಣಕ್ಕೆ ನಿತ್ಯ ಜಮೀನಿಗೆ, ತೋಟಗಳಿಗೆ ಹೋಗಿ ಬರುವುದು ಅನಿವಾರ್ಯ. ಗ್ರಾಮಗಳ ಜಮೀನಿನ ಆಸುಪಾಸಿನಲ್ಲಿ ಕರಡಿ ಕಾಣಿಸಿಕೊಂಡಿದ್ದರಿಂದ ರೈತರು ಹೊಲಗಳಿಗೆ ಹೋಗಿ ಬರಲು ಭಯಪಡುವಂತಾಗಿದೆ.

ಅರಣ್ಯಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ಚಿತ್ರದುರ್ಗದ ಪ್ರಾದೇಶಿಕ ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಕರಡಿ ಹಿಡಿಯಲು ಬಲೆಹಾಕಿದ್ದಾರೆ. ಆದರೆ ಕರಡಿ 6 ಅಡಿ ಎತ್ತರದ ಬಲೆ ಎಗರಿ ತಪ್ಪಿಸಿಕೊಂಡಿದೆ.ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿ ಬೆನ್ನತ್ತಿ ಹಿಡಿಯುವ ಯತ್ನ ನಡೆಸಿದ್ದಾರೆ.ಬಸವನ ಶಿವನಕೆರೆ, ಬೇಡರಶಿವನಕೆರೆ, ಕಬ್ಬಿಗೆರೆ ಗ್ರಾಮಗಳ ಮೂಲಕ ಓಡಿ ಹೋದ ಕರಡಿ ಗವೇಶ್ವರನ ಗುಡ್ಡಸೇರಿದೆ. ಅರಣ್ಯ ಸಿಬ್ಬಂದಿ ಮೂರು ದಿನಗಳಿಂದ ಕರಡಿ ಕಾಣಿಸಿಕೊಂಡ ಗ್ರಾಮಗಳ ಬಳಿ ಗಸ್ತು ತಿರುಗುತ್ತಿದ್ದಾರೆ.ಸಾರ್ವಜನಿಕರು ಆತಂಕ ಪಡಬೇಕಿಲ್ಲ’ ಎಂದು ಉಪ ವಲಯ ಅರಣ್ಯಾಧಿಕಾರಿ ರುದ್ರಮುನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT