ಹೊಸದುರ್ಗ: ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಬೆಲಗೂರಿನಿಂದ ಶೃಂಗೇರಿಗೆ ಕೆಎಸ್ಆರ್ಟಿಸಿ ನೇರ ಬಸ್ ಸಂಚಾರಕ್ಕೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪ ಈಚೆಗೆ ಹಸಿರು ನಿಶಾನೆ ತೋರಿದರು.

‘ತಾಲ್ಲೂಕಿನಿಂದ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ತೆರಳಿ, ಅಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಭಕ್ತರಿಗೆ ಅನುಕೂಲವಾಗಲಿದೆ. ಬೆಲಗೂರು ಹಾಗೂ ಶೃಂಗೇರಿ ಪುಣ್ಯಕ್ಷೇತ್ರಗಳಾಗಿದ್ದು, ಎರಡೂ ಕಡೆಯ ಭಕ್ತರಿಗೆ ಹೊಸ ಮಾರ್ಗದಿಂದ ನೆರವಾಗುತ್ತದೆ. ಶೃಂಗೇರಿ ಮಾರ್ಗದ ಹಲವು ವಸತಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಾಲ್ಲೂಕಿನ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ’ ಎಂದು ಗೋವಿಂದಪ್ಪ ಹೇಳಿದರು.

‘ಚಿತ್ರದುರ್ಗ ಕೆಎಸ್ಆರ್ಟಿಸಿ ವಿಭಾಗೀಯ ಹಿರಿಯ ನಿಯಂತ್ರಣಾಧಿಕಾರಿ ಬಸ್ ಮಂಜೂರು ಮಾಡಿಸಿದ್ದಾರೆ. 50 ಸೀಟ್ಗಳಿದ್ದು, ನಾಲ್ಕು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ‘ಶಕ್ತಿ ಯೋಜನೆ’ಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು’ ಎಂದರು.

ಬೆಲಗೂರಿನ ವಿಜಯ ಬಿಂಧು ಮಾಧವ ಶರ್ಮಾ ಸ್ವಾಮೀಜಿ ಪೂಜಾ ಕಾರ್ಯ ನೆರವೇರಿಸಿದರು.

ಬಸ್ ಹೊರಡುವ ಮಾರ್ಗ: ಬೆಲಗೂರು ಗ್ರಾಮದಿಂದ ಪ್ರತಿದಿನ ಬೆಳಿಗ್ಗೆ 7.15ಕ್ಕೆ ಹೊರಡುವ ಬಸ್, ಹೊಸದುರ್ಗ, ಅಜ್ಜಂಪುರ, ತರೀಕೆರೆ, ಎನ್.ಆರ್. ಪುರ ಮಾರ್ಗವಾಗಿ ಮಧ್ಯಾಹ್ನ 1.15ಕ್ಕೆ ಶೃಂಗೇರಿ ತಲುಪಲಿದೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ಶೃಂಗೇರಿಯಿಂದ ಹೊರಟು ಹೊಸದುರ್ಗ ಮಾರ್ಗವಾಗಿ ಬೆಲಗೂರು ಬಸ್ ನಿಲ್ದಾಣ ತಲುಪಲಿದೆ. ಬೆಲಗೂರಿನಿಂದ ಶೃಂಗೇರಿಗೆ ₹244, ಹೊಸದುರ್ಗದಿಂದ ಶೃಂಗೇರಿಗೆ ₹214 ದರ ನಿಗದಿಪಡಿಸಲಾಗಿದೆ.

ಕೆಪಿಸಿಸಿ ಸದಸ್ಯರಾದ ಎಂ.ಪಿ. ಶಂಕರ್, ಅಲ್ತಾಫ್ ಪಾಷಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಮುಖಂಡರಾದ ದೀಪಿಕಾ ಸತೀಶ್, ಆಗ್ರೊ ಶಿವಣ್ಣ, ಕಾರೇಹಳ್ಳಿ ಬಸವರಾಜ್, ಜಮ್ಮಾಪುರದ ಪ್ರಭು, ಕೆಎಸ್ಆರ್ಟಿಸಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಧರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-44-148053073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.