ಭಾನುವಳ್ಳಿ (ಕಡರನಾಯ್ಕನಹಳ್ಳಿ): ಭಾನುವಳ್ಳಿ ಗ್ರಾಮದ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದಲ್ಲಿ ಗ್ರಾಹಕರು ಸಿಲಿಂಡರ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಬುಕ್ ಮಾಡಿದವರಿಗೆ ಸಿಲಿಂಡರ್ಗಳು ದೊರೆಯದ ಕಾರಣ ಅಡುಗೆ ಮಾಡಲು ಸಮಸ್ಯೆಯಾಗಿದೆ ಎಂದು ಗ್ರಾಹಕರು ದೂರಿದರು.

‘ಎಚ್ಪಿ ಗ್ಯಾಸ್ ಸಿಲಿಂಡರ್ಗಳೂ ವಿತರಣೆ ಆಗಿಲ್ಲ. ಸಿಲಿಂಡರ್ ಬುಕ್ ಮಾಡಿದ ಗ್ರಾಹಕರು ಗ್ರಾಮಗಳ ರಸ್ತೆ ಬದಿಗಳಲ್ಲಿ ಕಾಯುತ್ತಿದ್ದಾರೆ. ಒಂದು ವಾರದಿಂದ ಸಿಲಿಂಡರ್ಗಳು ಬಂದಿಲ್ಲ. ಸಿಲಿಂಡರ್ ವಿತರಿಸುವವರು ಕರೆಯನ್ನು ಸ್ವೀಕರಿಸುತ್ತಿಲ್ಲ. ಕಚೇರಿಗೆ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ’ ಎಂದು ಗ್ರಾಹಕರೊಬ್ಬರು ದೂರಿದರು.

ಕಡರನಾಯ್ಕನಹಳ್ಳಿ, ವಾಸನ, ನಂದಿಗುಡಿ, ಗೋವಿನಹಾಳು ಮುಂತಾದ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ ಇದೆ. ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಲು ಭಾನುವಳ್ಳಿ ಪ್ರಕಾಶ್, ಯಕ್ಕೆಗೊಂದಿ ರುದ್ರಗೌಡ, ಕಡರನಾಯ್ಕನಹಳ್ಳಿ ಎಂ.ಎನ್. ವೆಂಕಟೇಶ್ ಮುಂತಾದವರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-43-1303878934

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.