ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧ ಪ್ರತಿಮೆಯ ಭವ್ಯ ಮೆರವಣಿಗೆ

Last Updated 16 ಮೇ 2022, 14:41 IST
ಅಕ್ಷರ ಗಾತ್ರ

ಚಿತ್ರದುರ್ಗ: ಬುದ್ಧ ಪೂರ್ಣಿಮೆ ಪ್ರಯುಕ್ತ ಗೌತಮ ಬುದ್ಧ ಪ್ರತಿಷ್ಠಾನ, ಕೋಟೆನಾಡು ಬುದ್ಧವಿಹಾರದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಬುದ್ಧ ಪ್ರತಿಮೆಯ ಮೆರವಣಿಗೆ ನಗರದಲ್ಲಿ ಭವ್ಯವಾಗಿ ನಡೆಯಿತು.

ಜಿಲ್ಲಾ ಕ್ರೀಡಾಂಗಣ ಮುಂಭಾಗದ ಗೌತಮ ಬುದ್ಧ ಪ್ರತಿಮೆಯ ಬಳಿಯಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ, ‘ಮನುಕುಲಕ್ಕೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧನ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಮೌನವೀಯ ಮೌಲ್ಯಗಳನ್ನು ಕಾರ್ಯಗತಗೊಳಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ದ್ವೇಷ, ಅಸೂಯೆ, ಘರ್ಷಣೆ, ಯುದ್ದದಂತಹ ಜಾಗತಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬುದ್ಧನ ತತ್ವಗಳಲ್ಲಿ ಇವುಗಳಿಗೆ ಪರಿಹಾರವಿದೆ. ಬುದ್ಧ ಪ್ರತಿಮೆ ಇರುವ ಸ್ಥಳ ಹಾಗೂ ಮಾರ್ಗಕ್ಕೆ ಅವರದೇ ಹೆಸರು ಇಡಲಾಗುವುದು. ವೃತ್ತವನ್ನು ಇನ್ನಷ್ಟು ಅಂದಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಪ್ರತಿಷ್ಠಾನದ ಸಂಚಾಲಕ ಬಿ.ಪಿ. ತಿಪ್ಪೇಸ್ವಾಮಿ, ಸಾಹಿತಿ ಪ್ರೊ.ಎಚ್.ಲಿಂಗಪ್ಪ, ಮಲ್ಲಿಕಾರ್ಜುನಪ್ಪ, ಪ್ರೊ.ರಾಜ್‌ಕುಮಾರ್, ಸಿದ್ದಲಿಂಗಮ್ಮ, ಬನ್ನೀಹಟ್ಟಿ ಮಲ್ಲೇಶ್, ಉಪನ್ಯಾಸಕ ಡಾ.ಗುರುಮೂರ್ತಿ, ಹುಚ್ಚವನಹಳ್ಳಿ ವೆಂಕಟೇಶ್ ಇದ್ದರು.

***

ಇಡೀ ಜಗತ್ತು ಹಿಂಸಾಮಾರ್ಗದಲ್ಲಿ ಸಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಬುದ್ಧನ ತತ್ವಗಳ ಅಗತ್ಯವಿದೆ. ಯುವ ಪೀಳಿಗೆಗೆ ಬುದ್ಧನ ತತ್ವ ಮಾದರಿ.
ಟಿ.ರಘುಮೂರ್ತಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT