‘ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ’

7

‘ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ’

Published:
Updated:
Prajavani

ಹೊಳಲ್ಕೆರೆ: ವಿದ್ಯಾರ್ಥಿಗಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಹಾಗೂ ಉಪನ್ಯಾಸಕ ನಿಸಾರ್ ಅಹಮದ್ ಹೇಳಿದರು.

ಪಟ್ಟಣದ ಎಂ.ಎಂ. ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕುಂಡದ ಸಸಿಗಳಾಗದೆ, ಪರಿಸರದಲ್ಲಿ ಬೆಳೆಯುವ ಮರಗಳಾಗಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿ ಸಕ್ತಿಯವಾಗಿ ಪಾಲ್ಗೊಳ್ಳಬೇಕು. ಸತತ ಅಧ್ಯಯನ, ಅವಿರತ ಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಎಂದರು.

ಕ್ರೀಡೆ ಹಾಗೂ ವಿವಿಧ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಉಪ ಪ್ರಾಂಶುಪಾಲರಾದ ನಿರ್ಮಲಾ ದೇವಿ, ದಾನಿಗಳಾದ ಬೆಂಗಳೂರಿನ ಸುಧಾಮಣಿ, ಶ್ರೀಕಂಠಯ್ಯ, ಜಮದಗ್ನಿ, ಶಿಕ್ಷಕರಾದ ಕೆ.ಎಂ.ಮೋಹನ್, ಎಂ.ಎಸ್.ಮೂಲಿಮನಿ, ಯಶೋದಮ್ಮ, ಪಿ.ಕೆ. ರಾಜಪ್ಪ ಇದ್ದರು.

ಶಿಕ್ಷಕಿ ಜನತಾ ಸ್ವಾಗತಿಸಿದರು. ಶಶಿಕಲಾ ನಿರೂಪಿಸಿದರು. ಎಂ.ಜಿ.ಚಂದ್ರಶೇಖರ್ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !