ಸಿರಿಗೆರೆ: ಸಮೀಪದ ಬ್ಯಾಲಹಾಳ್ ಗ್ರಾಮದಲ್ಲಿ ಮೂರ್ನಾಲ್ಕು ತಿಂಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸಿದ್ದ ಗ್ರಾಮದ ದಲಿತ ಕಾಲೊನಿ ನಿವಾಸಿಗಳು ಬುಧವಾರ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಕುಡಿಯಲು ನೀರು ಪೂರೈಸಿ ಎಂದು ಆಗ್ರಹಿಸಿದರು.

‘ಹಲವು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದ್ದೇವೆ. ಗ್ರಾಮದ ಜನರಿಗೆ ನೀರು ಒದಗಿಸಲು 8 ಕೊಳವೆ ಬಾವಿಗಳಿವೆ. ಆದರೆ, ಸಮರ್ಪಕ ನೀರು ಸರಬರಾಜು ಮಾಡಲು ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಗ್ರಾಮದ ದಲಿತ ಮುಖಂಡ ಬಿ.ಕೆ. ಬಸವರಾಜ್ ದೂರಿದರು.

‘ಗ್ರಾಮದಲ್ಲಿ ಓವರ್ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಕೊಳವೆ ಬಾವಿಯ ನೀರನ್ನು ಇಲ್ಲಿ ಸಂಗ್ರಹಿಸಿ ಗ್ರಾಮದ ಜನರಿಗೆ ಪೂರೈಸಿದರೆ ಎಲ್ಲರಿಗೂ ನೀರು ಸಿಗುತ್ತದೆ. ಆದರೆ, ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಾಲ್ಕು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಓವರ್ಹೆಡ್ ಟ್ಯಾಂಕಿನಲ್ಲಿ ಸಂಗ್ರಹಿಸುವಷ್ಟು ನೀರಿನ ಒತ್ತಡ ಇಲ್ಲ. ಹಾಗಾಗಿ ತೆರೆದ ಪೈಪ್ಗಳಲ್ಲಿ ನೀರು ಪೂರೈಸುತ್ತಿದ್ದೇವೆ’ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಸ್ಮಾ ತಿಳಿಸಿದರು.

‘ಗ್ರಾಮದ ಉಪ್ಪಿನ ಹಳ್ಳದಲ್ಲಿ ಸ್ವಲ್ಪಮಟ್ಟಿಗೆ ನೀರು ಸಿಗುತ್ತಿದೆ. ಸಮೀಪದ ಕಲ್ಕುಂಟೆ ರಸ್ತೆಯಲ್ಲಿನ ಕೊಳವೆ ಬಾವಿಗೆ ಮೋಟಾರು ಅಳವಡಿಸಿ ಪೈಪ್ಲೈನ್ ಮೂಲಕ ನೀರು ಒದಗಿಸಲು ಪ್ರಯತ್ನಿಸಲಾಗುವುದು’ ಎಂದರು.

ಮುಖಂಡರಾದ ಬಿ.ಕೆ. ಬಸವರಾಜ್, ವಿರೂಪಾಕ್ಷಪ್ಪ, ಶಾಂತಕುಮಾರ್. ಟಿ, ರಾಜಪ್ಪ ನಾಗರಾಜ್, ಹನುಮಂತಪ್ಪ, ಮಂಜಪ್ಪ ಡಿ, ಶ್ರೀನಿವಾಸ್, ವೆಂಕಟೇಶ್, ಆದರ್ಶ್, ದರ್ಶನ್, ಸಂತೋಷ್, ಅಜ್ಜಯ್ಯ, ಕೆಂಚಮ್ಮ, ಪ್ರೇಮಕ್ಕ, ಸರಿತಾ ಸೇರಿ ಹಲವರು ಭಾಗಿಯಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-44-922527896

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.