ಚಳ್ಳಕೆರೆ: ದಾಖಲೆ ಇಲ್ಲದ ₹ 8.38 ಲಕ್ಷ, ವಾಹನ ವಶ

ಮಂಗಳವಾರ, ಏಪ್ರಿಲ್ 23, 2019
27 °C

ಚಳ್ಳಕೆರೆ: ದಾಖಲೆ ಇಲ್ಲದ ₹ 8.38 ಲಕ್ಷ, ವಾಹನ ವಶ

Published:
Updated:
Prajavani

ಚಳ್ಳಕೆರೆ: ಅಧಿಕೃತ ದಾಖಲೆ ಇಲ್ಲದೆ ಬೊಲೆರೊ ವಾಹನದಲ್ಲಿ ₹ 8.38 ಲಕ್ಷ ಸಾಗಿಸುತ್ತಿರುವುದನ್ನು ಚುನಾವಣಾಧಿಕಾರಿಗಳು ನಗರದ ಹೊರವಲಯದ ಚಿತ್ರದುರ್ಗ ರಸ್ತೆ ಕೆಇಬಿ ಮುಂಭಾಗದ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ಪತ್ತೆ ಹಚ್ಚಿದ್ದಾರೆ.

ಚಿತ್ರದುರ್ಗದ ಕಡೆಯಿಂದ ಬಂದ ಬೊಲೆರೊ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಹೂವಿನ ಕುಂಡಗಳ ನಡುವೆ ಇಟ್ಟಿದ್ದ ಬ್ಯಾಗಿನಲ್ಲಿ ಈ ಹಣ ಸಿಕ್ಕಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಕಾರ್ಮಿಕರಿಗೆ ಕೂಲಿ ನೀಡಲು ಚಿತ್ರದುರ್ಗದ ಪಂಜಾಬ್ ಬ್ಯಾಂಕಿನಲ್ಲಿ ಹಣ ಬಿಡಿಸಿಕೊಂಡು ಹೋಗುತ್ತಿರುವುದಾಗಿ ಬೊಲೆರೊದಲ್ಲಿದ್ದ ಹೈದರಾಬಾದ್ ದಿಲೀಪ್ ಬಿಲ್ಡರ್‍ನ ವ್ಯವಸ್ಥಾಪಕ ಅಮರನಾಥ್ ತಿಳಿಸಿದ್ದಾರೆ. ಎಸ್‍ಎಸ್‍ಟಿ ಅಧಿಕಾರಿ ಪ್ರೊ. ಕರಿಬಸಪ್ಪ ಹಾಗೂ ಪೊಲೀಸ್‌ ಅಧಿಕಾರಿ ತಿಪ್ಪೇಸ್ವಾಮಿ ಹಣ ಹಾಗೂ ವಾಹನವನ್ನು ವಶಪಡಿಸಿಕೊಂಡು ಚುನಾವಣಾ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಣ್ಣ, ಪಿಎಸ್‍ಐ ಸತೀಶನಾಯ್ಕ, ತಿಪ್ಪೇಸ್ವಾಮಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !