ಚಳ್ಳಕೆರೆ: ಗೌತಮ ಬುದ್ಧನ ಬೋಧನೆಗಳು ಶಾಂತಿ ಮತ್ತು ಸೌಹಾರ್ದಯುತ ಬದುಕಿಗೆ ಸದಾ ಮಾರ್ಗದರ್ಶಿಯಾಗಿವೆ ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯರಾದ ಬಿ.ಎಂ. ಗೀತಾ ಸುಂದರೇಶ್ ದೀಕ್ಷಿತ್ ಅಭಿಪ್ರಾಯಪಟ್ಟರು.

ನಗರದ ತ್ಯಾಗರಾಜನಗರದ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಬುದ್ಧ ಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬುದ್ಧ ಎಂದರೆ ಎಚ್ಚರಗೊಂಡವನು, ಜ್ಞಾನೋದಯ ಪಡೆದವನು ಎಂದರ್ಥ. ಚತುರ್ ಆರ್ಯ ಸತ್ಯಗಳು, ಅಷ್ಟಾಂಗ ಮಾರ್ಗಗಳು ಅವನ ಪ್ರಸಿದ್ಧ ಬೋಧನೆಗಳು. ಬುದ್ಧ ಹುಟ್ಟಿದ್ದು, ಜ್ಞಾನೋದಯ ಪಡೆದದ್ದು, ನಿರ್ವಾಣ ಹೊಂದಿದ್ದು ವೈಶಾಖ ಬುದ್ಧ ಪೂರ್ಣಿಮೆಯಂದು ಎಂದು ತಿಳಿಸಿದರು.

ಬುದ್ಧ ಪೂರ್ಣಿಮೆ ಪ್ರಯುಕ್ತ ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಬುದ್ಧನ ನಾಮಸ್ಮರಣೆ, ಯತೀಶ್ ಎಂ. ಸಿದ್ದಾಪುರ ಅವರಿಂದ ಬುದ್ಧನ ಭಜನೆಗಳು ಹಾಗೂ ‘ಶ್ರೀ ಶಾರದಾದೇವಿ ಜೀವನಗಂಗಾ’ ಗ್ರಂಥ ಪಾರಾಯಣ, ಶ್ರೀಮತಿ ಎಂ. ಗೀತಾ ನಾಗರಾಜ್, ಪ್ರಮೀಳಾ ಜಗದೀಶ್, ಯಶೋಧಾ ದೇವರಾಜ್, ನೇತ್ರಾ ಮಂಜುನಾಥ, ತಿಪ್ಪಮ್ಮ ಉಮಾಶಂಕರ್ ಅವರಿಂದ ವಿಶೇಷ ಭಜನೆ ನಡೆಯಿತು.

ನಂಜಮ್ಮ ಕೆಂಚಪ್ಪ, ಭಾಗ್ಯಲಕ್ಷ್ಮಿ, ಎಚ್. ಲಕ್ಷ್ಮಿದೇವಮ್ಮ, ಎಂ. ಲಕ್ಷ್ಮಿದೇವಮ್ಮ, ದ್ರಾಕ್ಷಾಯಿಣಿ, ಜಯಮ್ಮ ನರಸಿಂಹಮೂರ್ತಿ, ಸುವರ್ಣ ನಾಗರಾಜ್, ಸರಸ್ವತಿ ರಾಜು,ಪ್ರೇಮಾ, ಗೀತಾ ವೆಂಕಟೇಶ್, ಹನ್ವಿಕಾ, ಅನುಸೂಯ ರಾಘವೇಂದ್ರ, ಸಹನಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-44-526214910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.