ಚಳ್ಳಕೆರೆ: ತಾಲ್ಲೂಕಿನ ಯಲಗಟ್ಟೆ ಸಮೀಪವಿರುವ ಗೊಲ್ಲರಹಟ್ಟಿ ಗ್ರಾಮದಲ್ಲಿ ಏಪ್ರಿಲ್ 20ರಿಂದ 29ರ ವರೆಗೆ ಅದ್ಧೂರಿಯಾಗಿ ವೀರಸಿರಿಯಣ್ಣ ಸ್ವಾಮಿ, ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ಕದರಿ ನರಸಿಂಹಸ್ವಾಮಿ ನೂತನ ದೇವಸ್ಥಾನಗಳ ಲೋಕಾರ್ಪಣೆ ಹಾಗೂ ಕಳಸ ಮಹೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಈ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಜೆ 13 ಗುಡಿಕಟ್ಟಿನ ದೇವರುಗಳಾದ ನೇರ್ಲಿಗೆ ರಾಮ ದೇವರು, ರಂಗಸ್ವಾಮಿ ವೀರಕರಿಯಣ್ಣ ಸ್ವಾಮಿ, ಬಾಲಕೃಷ್ಣ ಸ್ವಾಮಿ, ತಿಮ್ಮಪ್ಪ ಯಾನೆ ಯತ್ತಪ್ಪ, ರಂಗಸ್ವಾಮಿ, ಜ್ಯೋತಿ ತಿಮ್ಮಪ್ಪಸ್ವಾಮಿ, ಗೊಲ್ಲನಕಟ್ಟೆ ಗಾರಿಹಟ್ಟಿ ತಿಮ್ಮಪ್ಪಸ್ವಾಮಿ, ರಂಗಸ್ವಾಮಿ, ಕೊಂಡ್ಲಹಳ್ಳಿ ತಿಮ್ಮಪ್ಪಸ್ವಾಮಿ, ರೇಣುಕಾಪುರ ತಿಮ್ಮಪ್ಪಸ್ವಾಮಿ, ಮನ್ನೇಕೋಟೆ ತಿಮ್ಮಪ್ಪಸ್ವಾಮಿ, ಕಲ್ಲಹಳ್ಳಿ ತಿಮ್ಮಪ್ಪಯಾನೆ ಮರಳು ಸಿದ್ದಪ್ಪ, ದುಮ್ಮಿ ಗೊಲ್ಲರಹಟ್ಟಿ ತಿಮ್ಮಪ್ಪಸ್ವಾಮಿ ಮೂರ್ತಿಗಳನ್ನು ಗೊಲ್ಲರಹಟ್ಟಿ ಗ್ರಾಮದಿಂದ ಉರುಮೆ, ಡೋಲು, ಜಾನಪದ ಗಾಯನಗಳ ಮೂಲಕ 3 ಕಿ.ಮೀ. ದೂರದಲ್ಲಿರುವ ಕೋನಿಗರಹಳ್ಳಿ ಸಮೀಪವಿರುವ ವೇದಾವತಿ ನದಿಗೆ ತೆರಳಿ ಗಂಗೆ ಪೂಜೆ ನೆರವೇರಿಸಲಾಯಿತು. ಬಳಿಕ ರಾತ್ರಿ ಗ್ರಾಮದಲ್ಲಿ ದೇವರುಗಳ ಬೃಹತ್ ಮೆರವಣಿಗೆ ನಡೆಸಿ ಸಿರಿಯಣ್ಣ, ಚಿತ್ರಲಿಂಗೇಶ್ವರ, ಕದರಿ ನರಸಿಂಹಸ್ವಾಮಿ ದೇವರುಗಳನ್ನು ಗುಡಿ ತುಂಬಿಸಲಾಯಿತು.

ಏಪ್ರಿಲ್ 27ರಂದು ಬೆಳಿಗ್ಗೆ ಶಾಂತಿ ಹೋಮ, ಪ್ರಾಣ ಪ್ರತಿಷ್ಠಾಪನಾ ಹೋಮ, ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಅಲಂಕಾರ, ಕಳಸ ಪ್ರತಿಷ್ಠಾಪನೆ ಬಳಿಕ ಮೂರು ದೇವರುಗಳ ಮೂರ್ತಿಗಳನ್ನು ನೂತನ ದೇಗುಲಗಳ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿ ಮಹಾಮಂಗಳಾರತಿ ನಡೆಸಲಾಗುತ್ತಿದೆ. ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ಶಾಸಕ ಟಿ.ರಘುಮೂರ್ತಿ, ಕೆ.ಸಿ. ವೀರೇಂದ್ರ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಪರುಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ಶಶಿಧರ್ ಭಾಗವಹಿಸುವರು.

ಏಪ್ರಿಲ್ 28ರಂದು ಬೆಳಿಗ್ಗೆ ಗಡಿ ಇಳಿಸುವ ಕಾರ್ಯ ನಡೆಯುತ್ತಿದೆ. ಸಂಜೆ ಹಳೆಹಟ್ಟಿ ಗೊಲ್ಲರಹಟ್ಟಿ ಗ್ರಾಮದಿಂದ ಗೊಲ್ಲರಹಟ್ಟಿ ಗ್ರಾಮದವರೆಗೆ ಭಂಡಾರ ಆಡಲಾಗುತ್ತದೆ. 29ರಂದು ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿರುವ ಭಕ್ತರಿಗೆ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.