ಚಳ್ಳಕೆರೆ: ‘15 ದಿನಗಳಿಂದ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ನೀರು ಪೂರೈಸುವಂತೆ ಪಿಡಿಒಗೆ ಹೇಳೋಣವೆಂದರೆ ಕರೆ ಸ್ವೀಕರಿಸುತ್ತಿಲ್ಲ’ ಎಂದು ದೂರಿ ಕುರುಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಮುಂಭಾಗ ಬಿಂದಿಗೆ ಹಿಡಿದು ನೀರಿಗಾಗಿ ಧರಣಿ ನಡೆಸಿದರು.

‘ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಗೊಲ್ಲರಹಟ್ಟಿಯಲ್ಲಿ ಮೋಟಾರ್ ಕೆಟ್ಟು ಹೋಗಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬೆಳಗಾದರೆ ಸಾಕು ನೀರಿಗಾಗಿ ಹೊಲ ಗದ್ದೆಗಳಿಗೆ ಬಿಂದಿಗೆ ಹಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ವಾರಕ್ಕೆ ಮೂರು ಬಾರಿ ನೀರು ಬಿಡ್ತಾರೆ. 15 ದಿನಗಳಿಂದ ಬಹಳಷ್ಟು ಕಷ್ಟ ಆಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ಊರಿಗೆ ಕುಡಿಯಲು ನೀರು ಬಿಡುವವರೆಗೆ ಇಲ್ಲಿಂದ ಹೋಗೋದಿಲ್ಲ’ ಎಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಬಿಗಿಪಟ್ಟು ಹಿಡಿದರು. ಸ್ಥಳಕ್ಕೆ ರಾಮಜೋಗಿಹಳ್ಳಿ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ಬಿಇಒ ಕೆ.ಎಸ್. ಸುರೇಶ್ ಬಂದು ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಗ್ರಾಮಸ್ಥರಾದ ಶಾರದಮ್ಮ, ಮಂಜುಳಾ, ದೇವಿರಮ್ಮ, ಸಂಜೀವಮ್ಮ, ರಾಮಕ್ಕ, ದೇವಿರಮ್ಮ, ಸುಮಕ್ಕ, ಸುಮಿತ್ರ ಮಂಜಮ್ಮ, ರಂಜಿತಾ, ಲಕ್ಷ್ಮಿದೇವಿ, ಶಿವಮ್ಮ, ಶಾರದಮ್ಮ, ಶಿವಣ್ಣ, ರಾಜು, ಕೃಷ್ಣ, ಕರಿಯಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-44-1080580944

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.