ಚಳ್ಳಕೆರೆ: ತಾಲ್ಲೂಕಿನಲ್ಲಿ ತೊಗರಿ ಬೆಳೆದ 3,850 ರೈತರಿಗೆ ₹3,52,87000 ಮಧ್ಯಂತರ ಪರಿಹಾರದ ಹಣ ಬಿಡುಗಡೆ ಆಗಿದೆ ಎಂದು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಸಿ. ಶಿವಲಿಂಗಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಶೇಂಗಾ, ತೊಗರಿ ಅಧಿಕವಾಗಿ ಬಿತ್ತನೆ ಆಗುತ್ತದೆ. ಸಕಾಲಕ್ಕೆ ಮಳೆ ಬಾರದೆ ಪ್ರತಿವರ್ಷ ಬೆಳೆ ಕೈ ಸೇರದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರೈತರಿಂದ ಬೆಳೆ ವಿಮೆ ಕಟ್ಟಿಸಿಕೊಳ್ಳುವ ಕಂಪನಿಗಳು ರೈತರಿಗೆ ಮೋಸ ಮಾಡಲು ನಿಂತಿವೆ. ಪ್ರಸಕ್ತ ವರ್ಷದ ಇಳುವರಿಯನ್ನು ಹಿಂದಿನ 5 ವರ್ಷಗಳ ಸರಾಸರಿ ಇಳುವರಿಗೆ ತಾಳೆ ಮಾಡಿ ವಿಮೆ ನೀಡುವ ನಿಯಮ ಹೇಳಿಕೊಂಡು ವಂಚನೆ ನಡೆಸುತ್ತವೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 5 ವಾರ ಸತತ ಮಳೆ ಇಲ್ಲದೆ ತೊಗರಿ ಬೆಳೆ ನಷ್ಟವಾಗಿತ್ತು. ತೊಗರಿ ಬೆಳೆ ನಷ್ಟಕ್ಕೆ ಮಧ್ಯಂತರ ಪರಿಹಾರಕ್ಕಾಗಿ ಶಾಸಕ ಟಿ.ರಘುಮೂರ್ತಿ ಸೇರಿ ಜಿಲ್ಲಾಧಿಕಾರಿ, ಜಿಲ್ಲಾ ಸಚಿವರು, ಕೃಷಿ ಆಯುಕ್ತರಿಗೂ ಮತ್ತು ಕೃಷಿ ಸಚಿವರಿಗೂ ದೂರು ಸಲ್ಲಿಸಿ ಹೋರಾಟ ಮಾಡಲಾಗಿತ್ತು. ಅಧಿಕಾರಿಗಳಿಂದ ನ್ಯಾಯ ಸಿಗುವ ವಿಳಂಬ ಮಾಡಿದ್ದರು. ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಸ್ವಾಮೀಜಿಗಳ ನ್ಯಾಯ ಪೀಠಕ್ಕೂ ಮನವಿ ಮಾಡಿಕೊಂಡ ಪರಿಣಾಮ ಹಾಗೂ ಸಂಘದ ಅವಿರತ ಹೋರಾಟದ ಫಲವಾಗಿ ಮೊದಲ ಬಾರಿಗೆ ವಿಮಾ ಕಂಪನಿಯಿಂದ ಮಧ್ಯಂತರ ವಿಮೆ ಹಣ ರೈತರಿಗೆ ಬಿಡುಗಡೆ ಆಗಿದೆ ಎಂದು ಹೇಳಿದರು.

ರೈತರ ಬೆಳೆಗಳ ನಷ್ಟಕ್ಕೆ ವಿಮಾ ಬಿಡುಗಡೆಗೆ ಸಾಕಷ್ಟು ನಿಯಮ ನಿಬಂಧನೆ ಇರುತ್ತವೆ. ಬಿತ್ತನೆ ಪೂರ್ವದಲ್ಲಿ ಮಳೆಯ ಕೊರತೆಯಿಂದ ಶೇ.75 ರಷ್ಟು ಬಿತ್ತನೆ ಕುಂಠಿತವಾದಾಗ ಮತ್ತು ಬಿತ್ತನೆ ಬಳಿಕೆ ಮಳೆಯ ಕೊರತೆಯಿಂದ ಶೇ.50 ರಷ್ಟು ಬೆಳೆ ನಷ್ಟವಾಗಿದೆ ಎಂದಾಗ ಮಾತ್ರ ವಿಮೆಗೆ ಅರ್ಹತೆ ಇರುತ್ತದೆ. ಸೆಪ್ಟೆಂಬರ್ ತಿಂಗಳ ಪೂರ ಮಳೆಯ ಕೊರತೆಯಿಂದ ತೊಗರಿ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ಮತ್ತು ಸ್ಥಳ ಪರಿಶೀಲನೆ ವರದಿ ಆಧಾರಿತವಾಗಿ 3,850 ರೈತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಆಗಿದೆ. ಅದೇ ರೀತಿ ಶೇಂಗಾ ಬೆಳೆಗಾರರಿಗೆ ಈ ವಾರದಲ್ಲಿ ವಿಮೆ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಮಂಜುನಾಥ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ರೈತ ಆರ್.ಎ. ದಯಾನಂದ ಮೂರ್ತಿ, ಡಿ.ಭರತ್ ರೆಡ್ಡಿ, ವಿ.ಎಸ್. ಸಿದ್ದೇಶ್ವರ ರೆಡ್ಡಿ, ಎನ್. ಪ್ರಕಾಶ್, ಎಚ್.ಶರಣಪ್ಪ ಜಿ.ಎಂ.ಸಂದೀಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.