ಚಳ್ಳಕೆರೆ: ನಗರದ ವಾಸವಿ ಕಾಲೊನಿಯ ಶಾರದಾಶ್ರಮದ ದೇವಸ್ಥಾನ ಕಟ್ಟಿದ ಕಾರ್ಮಿಕರು ಮತ್ತು ಇತರ 15 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ಗಳನ್ನು ಆಶ್ರಮದ ಸ್ವಯಂ ಸೇವಕರು ಎಲ್ಲಾ ಕಾರ್ಮಿಕರಿಗೆ ಪೂಜೆ ಮತ್ತು ಆರತಿ ಮಾಡಿ ವಿತರಿಸಿದರು.

ಕಿಟ್ಗಳನ್ನು ವಿತರಿಸಿದ ಶಾರದಾಶ್ರಮದ ಅಧ್ಯಕ್ಷೆ ಮಾತಾಜಿ ತ್ಯಾಗಮಯೀ ಆಶೀರ್ವಚನ ನೀಡಿ, ‘ಆಶ್ರಮದಿಂದ ಪ್ರತಿ ತಿಂಗಳು ಸ್ವಾಮಿ ವಿವೇಕಾನಂದರ ಜೀವ ಶಿವಸೇವಾ ಕಾರ್ಯಕ್ರಮದ ಅಂಗವಾಗಿ ಬಡ- ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಗುತ್ತಿದೆ. ಈ ಬಾರಿ ಆಶ್ರಮದ ದೇವಸ್ಥಾನವನ್ನು ಕಟ್ಟಿದ ಕಾರ್ಮಿಕರು ಮತ್ತು ಇತರರಿಗೆ ರಾಗಿ, ಗೋಧಿ, ಬೇಳೆ, ಬೆಲ್ಲ, ಎಣ್ಣೆ, ಸೋಪು ಸೇರಿದಂತೆ ದಿನಬಳಕೆಯ ವಸ್ತುಗಳು ಒಳಗೊಂಡ ಕಿಟ್ಗಳನ್ನು ಆಶ್ರಮದ ಭಕ್ತರ ಆರ್ಥಿಕ ನೆರವಿನಿಂದ ನೀಡಲಾಗುತ್ತಿದೆ. ಕಾರ್ಮಿಕರು ಈ ವಸ್ತುಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಲಿ’ ಎಂದು ಸಲಹೆ ನೀಡಿದರು.

ಆಶ್ರಮದ ಭಕ್ತರಾದ ಯತೀಶ್ ಎಂ ಸಿದ್ದಾಪುರ, ಎಚ್.ಲಕ್ಷ್ಮಿದೇವಮ್ಮ, ನೇತಾಜಿ ಪ್ರಸನ್ನ, ರಮೇಶ್, ಎಂ.ಗೀತಾ ನಾಗರಾಜ್, ಡಾ.ಸಿ.ಟಿ.ಬಸವರಾಜಪ್ಪ, ಡಾ.ಲಾವಣ್ಯ, ಪಿ.ಎಸ್.ಮಾಣಿಕ್ಯ, ವನಜಾಕ್ಷಿ, ಬೊಮ್ಮಕ್ಕ, ಪೂಜಾ, ನಾಗರತ್ನಮ್ಮ ಹಾಗೂ ಬಾಪೂಜಿ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-44-1044776890

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.