ಚಳ್ಳಕೆರೆ: ನಗರದಲ್ಲಿ ಶಿಥಿಲಾವಸ್ಥೆ ತಲುಪಿರುವ 94 ಮಳಿಗೆಗಳನ್ನು ತೆರವುಗೊಳಿಸಲು ಬಂದ ನಗರಸಭೆ ಅಧಿಕಾರಿಗಳು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದು ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ನೆಹರು ವೃತ್ತದ ಸಮೀಪವಿರುವ, ನಗರಸಭೆಗೆ ಸೇರಿದ ಮಳಿಗೆಗಳ ತೆರವಿಗೆ ಆಯುಕ್ತೆ ನಾಗವೇಣಿ ಬುಧವಾರ ಬೆಳಿಗ್ಗೆ 200ಕ್ಕೂ ಹೆಚ್ಚು ಪೊಲೀಸರೊಂದಿಗೆ ಬಂದಿದ್ದರು. ಜೆಸಿಬಿ ತರಿಸಿ ತೆರವಿಗೆ ಮುಂದಾದಾಗ ಸ್ಥಳಕ್ಕೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಬಂದು ಅಂಗಡಿ ಮಾಲೀಕರಿಗೆ 3 ದಿನ ಕಾಲಾವಕಾಶ ನೀಡಬೇಕು. ಮಳಿಗೆಗಳಲ್ಲಿ ಸಂಗ್ರಹಿಸಿರುವ ವಸ್ತುಗಳನ್ನು ಬೇರೆಡೆ ಸಾಗಿಸಿ ಖಾಲಿ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕು. ಏಕಾಏಕಿ ಬಂದು ಅಂಗಡಿ ತೆರವು ಮಾಡಿದರೆ ಮಾಲೀಕರಿಗೆ ನಷ್ಟ ಆಗುತ್ತದೆ ಎಂದು ಬಾಡಿಗೆದಾರರ ಪರ ಮನವಿ ಮಾಡಿದ್ದರಿಂದ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.

ಬಳಿಕ ಕುಮಾರಸ್ವಾಮಿ ಸ್ಥಳದಲ್ಲಿಯೇ ಸುದ್ದಿಗೋಷ್ಠಿ ನಡೆಸಿದರು. ‘ಶಾಸಕರ ಮೌಖಿಕ ಆದೇಶದ ಮೇರೆಗೆ ಅಧಿಕಾರಿಗಳು ಜೆಸಿಬಿ ತರಿಸಿ ಮಳಿಗೆ ಕೆಡವಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಶಾಸಕ ರಘುಮೂರ್ತಿ ಚಳ್ಳಕೆರೆಯವರಲ್ಲ. ಹೊರಗಿನಿಂದ ಬಂದವರು. ಅವರಿಗೆ ಇಲ್ಲಿನ ಜನರ ಕಷ್ಟ ಅರ್ಥ ಆಗುವುದಿಲ್ಲ. ಒಂದು ವೇಳೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮೀಸಲಾತಿ ಬದಲಾದರೆ ಅವರು ಇಲ್ಲಿ ಇರುವುದಿಲ್ಲ. ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥ ಆಗುವ ತನಕ ಮಳಿಗೆಗಳನ್ನು ತೆರವು ಮಾಡಬಾರದು. ಬಾಡಿಗೆದಾರರಿಗೆ ಯಾವುದೇ ತೊಂದರೆ ನೀಡಬಾರದು’ ಎಂದು ಆಗ್ರಹಿಸಿದರು.

ತೆರವು ಕಾರ್ಯ ನಾಳೆ: ‘ಅಂದಾಜು 50 ವರ್ಷಗಳ ಹಿಂದೆ ನಿರ್ಮಿಸಿರುವ ಮಳಿಗೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಕಟ್ಟಡಗಳಲ್ಲಿ ಯಾವುದೇ ಗುಣಮಟ್ಟ ಕಾಣುತ್ತಿಲ್ಲ. ಈಗಾಗಲೇ ಹಲವು ಬಾರಿ ನೋಟಿಸ್ ನೀಡಿ ಮಳಿಗೆ ಖಾಲಿ ಮಾಡಲು ಸೂಚಿಸಿದ್ದೇವೆ. ಒಮ್ಮೆ ವಿದ್ಯುತ್ ಸ್ಥಗಿತಗೊಳಿಸಿ ಎಚ್ಚರಿಕೆ ನೀಡಲಾಗಿದೆ. ಆದರೂ ಮಾಲೀಕರು ಸ್ಪಂದಿಸುತ್ತಿಲ್ಲ. ಬಾಡಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸುಮಾರು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ’ ಎಂದು ನಗರಸಭೆ ಆಯುಕ್ತೆ ನಾಗವೇಣಿ ಹೇಳಿದ್ದಾರೆ.

‘ನ್ಯಾಯಾಲಯಕ್ಕೆ ವ್ಯಾಪಾರ ಮತ್ತು ವಾಸಿಸುವುದಕ್ಕೆ ಮಳಿಗೆಗಳು ಯೋಗ್ಯ ಇಲ್ಲ ಎಂಬುದು ಮನವರಿಕೆ ಆಗಿದೆ. ಆದ್ದರಿಂದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ನಮಗೆ ಆದೇಶ ನೀಡಿರುವುದರಿಂದ ತೆರವು ಮಾಡುತ್ತೇವೆ. ತೆರವು ಸ್ಥಳದಲ್ಲಿ ₹ 30 ಕೋಟಿ ವೆಚ್ಚದಲ್ಲಿ ನೂತನ ಮಳಿಗೆಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾಡಿಗೆದಾರರ ಮನವಿಯಂತೆ 3 ದಿನ ಕಾಲಾವಕಾಶ ನೀಡಿದ್ದೇವೆ. ಮಾರ್ಚ್ 28ರಂದು ಮತ್ತೆ ತೆರವು ಕಾರ್ಯ ಮುಂದುವರಿಸುತ್ತೇವೆ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-44-1511439945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.