ಚಳ್ಳಕೆರೆ: ಶಿಥಿಲಾವಸ್ಥೆ ತಲುಪಿದ ಮಳಿಗೆಗಳ ತೆರವು ಕಾರ್ಯವನ್ನು ಮಂಗಳವಾರ ಮುಂದುವರಿಸಿದ ನಗರಸಭೆ ಅಧಿಕಾರಿಗಳು ನಗರದ ಹೃದಯ ಭಾಗದಲ್ಲಿರುವ ಇಂದಿರಾ ಕಾಂಪ್ಲೆಕ್ಸ್ನಲ್ಲಿರುವ 37 ಮಳಿಗೆಗಳನ್ನು ತೆರವುಗೊಳಿಸಿದರು.

ಎರಡು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಗಳೂರು ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಸೇರಿದಂತೆ ನಾಲ್ಕು ಮಳಿಗೆಗಳನ್ನು ನೆಲಸಮ ಮಾಡಲಾಗಿದೆ.

1970ರಲ್ಲಿ ನಗರಸಭೆಯಿಂದ ನಿರ್ಮಿಸಲಾಗಿದ್ದ 94 ಮಳಿಗೆಗಳು ಅಪಾಯದ ಅಂಚಿಗೆ ತಲುಪಿದ್ದವು. ಆದರೂ ಇದರಲ್ಲಿಯೇ ವ್ಯಾಪಾರ ಮಾಡುತ್ತಿದ್ದ ಬಾಡಿಗೆದಾರರು ಮಳಿಗೆಗಳನ್ನು ಖಾಲಿ ಮಾಡಲು ಒಪ್ಪದೇ ಕೋರ್ಟ್ ಮೆಟ್ಟಿಲೇರಿದ್ದರು. ವಾಸ ಮತ್ತು ವ್ಯಾಪಾರಕ್ಕೆ ಸುರಕ್ಷಿತೆ ಇಲ್ಲದ ಮಳಿಗೆಗಳನ್ನು ಕೂಡಲೇ ಕಾನೂನು ರೀತಿಯಲ್ಲಿ ಖಾಲಿ ಮಾಡಿಸಿ ಎಂದು 11 ವರ್ಷಗಳ ಪ್ರಕರಣದಲ್ಲಿ ಕೋರ್ಟ್ ಆದೇಶ ನೀಡಿತ್ತು.

ನಗರಸಭೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯ ಆರಂಭಿಸಲಾಗಿದೆ. ಮಾರ್ಚ್ 25ರಂದು 220 ಪೊಲೀಸ್ ಸಿಬ್ಬಂದಿಯ ಭದ್ರತೆಯಲ್ಲಿ ಆರಂಭ ಮಾಡಿದ ತೆರವು ಕಾರ್ಯಕ್ಕೆ ಬಾಡಿಗೆದಾರರು ಮತ್ತು ಬಿಜೆಪಿ ಮುಖಂಡರು ಅಡ್ಡಿಪಡಿಸಿದ್ದರು. ಸ್ವಲ್ಪ ಕಾಲಾವಕಾಶ ಕೊಡಿ ಎಂದು ಕೇಳಿದ್ದರು. ಮತ್ತೆ 3 ದಿನದ ಬಳಿಕ ನಗರಸಭೆ ಸಿಬ್ಬಂದಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿದರು.

ನಗರಸಭೆ ಆಯುಕ್ತೆ ನಾಗವೇಣಿ ಅವರು ವರ್ಗಾವಣೆಯಾಗಿ ಬಂದ ಕೆಲವೇ ದಿನಗಳಲ್ಲಿ ಶಿಥಿಲ ಮಳಿಗೆಗಳ ತೆರವು ಕಾರ್ಯಕ್ಕೆ ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-44-113218946

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.