ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ-3 ಯಶಸ್ಸು: ಸ್ತಬ್ಧಚಿತ್ರ ಮೆರವಣಿಗೆ

Published 24 ಆಗಸ್ಟ್ 2023, 14:40 IST
Last Updated 24 ಆಗಸ್ಟ್ 2023, 14:40 IST
ಅಕ್ಷರ ಗಾತ್ರ

ಚಳ್ಳಕೆರೆ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ)ಯ ಮಹತ್ವದ ಚಂದ್ರಯಾನ-3 ಯಶಸ್ವಿಯಾದ ಪ್ರಯುಕ್ತ ಗುರುವಾರ ವಿವಿಧ ಸಂಘ-ಸಂಸ್ಥೆ ಹಾಗೂ ಶಾಲಾ ಮಕ್ಕಳು, ಇಸ್ರೊ ವಿಜ್ಞಾನಿಗಳು ಹಾಗೂ ಭಾರತಮಾತೆ ಬಗ್ಗೆ ಜಯಘೋಷ ಕೂಗುತ್ತಾ ಚಂದ್ರಯಾನ-3 ಸ್ತಬ್ಧಚಿತ್ರವನ್ನು ಆಟೊದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ವೇಳೆ ಪ್ರದರ್ಶಿಸಿದರು.

ಇಸ್ರೊ ವಿಜ್ಞಾನಿಗಳ ಪರಿಶ್ರಮದಿಂದ ತಯಾರಾದ ಚಂದ್ರಯಾನ-3 ಸಾವಿರಾರು ಮಕ್ಕಳ ವಿಜ್ಞಾನ ಕಲಿಕೆಗೆ ಪ್ರೇರಣೆಯಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ವಿಷಯವನ್ನು ಪರಿಣಾಮಕಾರಿಯಾಗಿ ಬೋಧಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನ-ತಂತ್ರಜ್ಞಾನದ ಆಸಕ್ತಿಯನ್ನು ಬೆಳೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಅವರು ಶಿಕ್ಷಕರಿಗೆ ಸಲಹೆ ನೀಡಿದರು.

ಇಂದಿನ ಮಕ್ಕಳನ್ನು ಮುಂದಿನ ವಿಜ್ಞಾನಿಗಳಾಗಿ ರೂಪಿಸಲು ಭಾರತೀಯ ಪ್ರಮುಖ ವಿಜ್ಞಾನಿಗಳ ಕೊಡುಗೆ ಕುರಿತ ಪುಸ್ತಕವನ್ನು ಮಕ್ಕಳಿಗೆ ತಪ್ಪದೇ ಮನನ ಮಾಡಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಆಡಳಿತಾಧಿಕಾರಿ ಧನಂಜಯ, ಶಿಕ್ಷಕ ಶ್ರೀಧರಕುಮಾರ್, ಎ.ಸಿ.ನಾಗೇಂದ್ರ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT