ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಸಂಗ್ರಹಕ್ಕೆ ಸೀಮಿತವಾದ ಚೆಕ್‌ಪೋಸ್ಟ್

ಹೆದ್ದಾರಿ ಮೂಲಕ ಸಾವಿರಾರು ಮಂದಿ ಪ್ರಯಾಣ
Last Updated 31 ಮಾರ್ಚ್ 2020, 4:36 IST
ಅಕ್ಷರ ಗಾತ್ರ

ಮೊಳಕಾಲ್ಮುರು:ಬಳ್ಳಾರಿಗೆ ಇರುವ ಮತ್ತೊಂದು ಹೆಸರು ಹೈದರಾಬಾದ್ ಕರ್ನಾಟಕದ ಹೆಬ್ಬಾಗಿಲು. ಈ ಹೆಬ್ಬಾಗಿಲು ಆರಂಭವಾಗುವುದು ತಾಲ್ಲೂಕಿನ ಗಡಿ ಮೂಲಕಎನ್ನುವುದು ಮಹತ್ವದ್ದು.

ಬೆಂಗಳೂರು, ಮೈಸೂರು ಭಾಗಕ್ಕೆ ಹೈದರಾಬಾದ್ ಜನರು ಹೋಗಬೇಕಾದರೆ ಮುಖ್ಯವಾಗಿ ತಾಲ್ಲೂಕಿನಲ್ಲಿ ಹೋಗಿರುವ ಶ್ರೀರಂಗಪಟ್ಟಣ- ಬೀದರ್‌ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸಬೇಕು. ಕೋವಿಡ್-19 ತಡೆಗೆ ಲಾಕ್‌ಡೌನ್ ಘೋಷಣೆಯಾದ ನಂತರ ಈ ಹೆದ್ದಾರಿಯಲ್ಲಿ ನಿತ್ಯಸಾವಿರಾರು ಜನರು ಕಂಡ ಕಂಡ ವಾಹನಗಳಲ್ಲಿ ಓಡಾಡುವುದು ಸಾಮಾನ್ಯವಾಗಿದೆ.

ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡಬಹುದು. ವಲಸೆ ಕಾರ್ಮಿಕರಿಂದ ಸಹ ಸೋಂಕು ಹರಡುವ ಭೀತಿಯನ್ನು ಕೆಲವೆಡೆ ಹೊರ ಹಾಕಿರುವ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್‌ಗಳಲ್ಲಿ ತಸಾಸಣೆ ನಡೆಸಲಾಗುತ್ತಿದೆ. ನಂತರ ದೂರು ಹೆಚ್ಚಾದ ಕಾರಣ 14 ದಿನ ನಿಗಾ ವ್ಯವಸ್ಥೆ, ಊಟ-ವಸತಿ ಕಲ್ಪಿಸಿ ನಂತರಕಳಿಸಲಾಗುವುದು ಎಂಬ ನಿರ್ಧಾರವನ್ನು ಜಿಲ್ಲಾಡಳಿತ ಘೋಷಣೆ ಮಾಡಿದವು. ಆದರೆ ತಾಲ್ಲೂಕಿನ ಚೆಕ್‌ಪೋಸ್ಟ್‌ಗಳಲ್ಲಿತಪಾಸಣೆ ಮಾಡಿ ಕಳಿಕೊಡಲಾಗುತ್ತಿದೆ ಅಷ್ಟೇ ಎಂಬ ಮಾಹಿತಿ ಸಿಕ್ಕಿದೆ.

‘ಬೆಂಗಳೂರು ಭಾಗದಿಂದ ಹೆಚ್ಚಾಗಿ ಜನರು ಬರುತ್ತಿದ್ದಾರೆ. ಹೆದ್ದಾರಿಯಲ್ಲಿರುವ ತಮ್ಮೇನಹಳ್ಳಿ ಯಲ್ಲಿನಿರ್ಮಿಸಿರುವ ತಪಾಸಣಾ ಕೇಂದ್ರ ಜಿಲ್ಲೆ ಮಟ್ಟಿಗೆ ಕೊನೆಯದಾಗಿದೆ. ನಂತರ ಬಳ್ಳಾರಿ ಜಿಲ್ಲೆಗೆ ಹೋಗುತ್ತಾರೆ. ಅಷ್ಟೊಂದು ದೂರದಿಂದ ಬಂದವರವನ್ನು ಇಲ್ಲಿಇನ್ನೇನು ಮಾಡುವುದು ಎಂದು ಕಳಿಸುತ್ತಿದ್ದೇವೆ. ಕಾರ್ಮಿಕರು ಊಟ, ನಿದ್ದೆ ಇಲ್ಲದೇ ಸೊರಗಿ ಹೋಗಿದ್ದಾರೆ. ನೋಡಿದರೆ ಸುಮ್ಮನೆಬಿಟ್ಟು ಕಳಿಸೋಣ ಎಂಬ ರೀತಿಯಲ್ಲಿದ್ದಾರೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಕೆಲ ವಾಹನದವರು ಪೊಲೀಸರಿಂದ ಪಾಸ್ ಪಡೆದುಕೊಂಡಿದ್ದಾರೆ. ಪರಿಶೀಲಿಸಿ ಬಿಡಲಾಗುತ್ತಿದೆ. ಕಾರ್ಮಿಕರ ಗುರುತಿನ ಚೀಟಿಯನ್ನು ಕಡ್ಡಾಯಪರಿಶೀಲಿಸಲಾಗುತ್ತಿದೆ. 24/7 ಚೆಕ್‌ಪೋಸ್ಟ್ ಕಾರ್ಯ ನಿರ್ವಹಿಸುತ್ತಿದೆ. ಎರಡು ದಿನಗಳಿಂದ ತುಸು ವಾಹನ ಸಂಚಾರ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ಬೆಂಗಳೂರಿಗೆ ವಲಸೆ ಹೋದ ಹೈದರಾಬಾದ್‌–ಕರ್ನಾಟಕ ಭಾಗದ ಜನರುತಾಲ್ಲೂಕಿನ ಮಾರ್ಗದ ಮೂಲಕವೇ ಊರು ತಲುಪಬೇಕು. ಶೇ 80ಕ್ಕೂ ಜನರು ಇದೇ ಮಾರ್ಗ ಬಳಸುವ ಕಾರಣ ಇಲ್ಲಿ ಹೆಚ್ಚು ವೈದ್ಯಕೀಯ ಹಾಗೂ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬೇಕು. ಅವರನ್ನು ಸಮರ್ಪಕ ತಪಾಸಣೆಗೆ ಒಳಪಡಿಸಬೇಕು ಎಂದು ಸ್ಥಳೀಯರುಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT