ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಬಿರುಸಿನ ಮಳೆ

Last Updated 17 ಮೇ 2022, 4:23 IST
ಅಕ್ಷರ ಗಾತ್ರ

ಚಿಕ್ಕಜಾಜೂರು:ಬಿ. ದುರ್ಗ ಹೋಬಳಿಯ ಹಲವೆಡೆ ಸೋಮವಾರ ಬಿರುಸಿನ ಹದ ಮಳೆಯಾಗಿದೆ.

ಸಮೀಪದ ಹಿರೇಕಂದವಾಡಿ, ತಣಿಗೆಹಳ್ಳಿ, ಕಲ್ಲವ್ವನಾಗತಿಹಳ್ಳಿ ಗ್ರಾಮಗಳಲ್ಲಿ ಗುಡುಗು ಸಹಿತ ಬಿರುಸಿನ ಮಳೆಯಾಯಿತು.

ಬಿ. ದುರ್ಗ ಹೋಬಳಿಯ ಬಹುತೇಕ ರೈತರು ಜಮೀನುಗಳನ್ನು ಬಿತ್ತನೆಗಾಗಿ ಹಸನು ಮಾಡಿಕೊಂಡಿದ್ದರು. ಸತತವಾಗಿ
ಸುರಿಯುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದೆ. ಸಾಸಲು, ಗಂಜಿಗಟ್ಟೆ, ಬಂಡೆಬೊಮ್ಮೆನಹಳ್ಳಿ, ಅಂದನೂರು, ಮುತ್ತುಗದೂರು, ಬಿ. ದುರ್ಗ, ಆಡನೂರು, ಪಾಡಿಗಟ್ಟೆ, ಚಿಕ್ಕಜಾಜೂರು, ಹಿರೇಎಮ್ಮಿಗನೂರು, ಚಿಕ್ಕಎಮ್ಮಿಗನೂರಿನಲ್ಲಿ ಸಾಧಾರಣ ಮಳೆಯಾಗಿದೆ.

ಅರಸನಘಟ್ಟ ಗ್ರಾಮದಲ್ಲಿ ಅಡಿಕೆ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿದೆ. ಗ್ರಾಮದ ಹಲವು ತೋಟ ಹಾಗೂ ರಸ್ತೆ ಬದಿಯಲ್ಲಿ ಮರಗಳು ಉರುಳಿ ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT