ಚಿಕ್ಕಜಾಜೂರು: ಗ್ರಾಮದಲ್ಲಿ ಭಾನುವಾರ ಗುಡುಗು, ಮಿಂಚು ಸಹಿತ ಬಿರುಸಿನ ಮಳೆಯಾಗಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಬಿ. ದುರ್ಗ ಹೋಬಳಿಯ ಸಾಸಲು, ಸಾಸಲುಹಳ್ಳಿ, ಗುಲಗಂಜಿಹಟ್ಟಿ, ಮುತ್ತುಗದೂರು, ಕಾಗಳಗೆರೆ, ದಂಡಗೇನಹಳ್ಳಿ, ವಿಶ್ವನಾಥನಹಳ್ಳಿ, ಕಾಳಘಟ್ಟ, ಕಾಳಘಟ್ಟ ವಡ್ಡರಹಟ್ಟಿ, ಲಂಬಾಣಿಹಟ್ಟಿ, ಅಂದನೂರು ಹಾಗೂ ಚಿತ್ರದುರ್ಗ ತಾಲ್ಲೂಕಿನ ಗಡಿ ಗ್ರಾಮಗಳಾದ ಬಂಡೆಬೊಮ್ಮೇನಹಳ್ಳಿ, ಇಂಗಳದಹಳ್ಳಿ ಮೊದಲಾದ ಕಡೆಗಳಲ್ಲಿಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ.

ಎರಡು ತಿಂಗಳಿಂದ ಬಿಸಿಲಿನ ತಾಪಮಾನಕ್ಕೆ ಕೊಳವೆ ಬಾವಿಗಳು ಬರಿದಾಗಿದ್ದು, ರೈತರು ಚಿಂತೆಗೆ ಒಳಗಾಗಿದ್ದರು. ಆದರೆ, ಮಳೆಯಿಂದಾಗಿ ವಾರದವರೆಗೆ ಅಡಿಕೆ ತೋಟಗಳಿಗೆ ನೀರು ಹಾಯಿಸುವ ಕೆಲಸಕ್ಕೆ ಬಿಡುವು ನೀಡಿದಂತಾಗಿದೆ ಎಂದು ರೈತರಾದ ಓಂಕಾರಪ್ಪ, ರವಿಕುಮಾರ್, ಶೇಖರಪ್ಪ, ಮುತ್ತುಗದೂರು ಪ್ರಭು ಸಂತಸ ಹಂಚಿಕೊಂಡರು.

ಬಿ. ದುರ್ಗ ಗ್ರಾಮದ ಕೆ.ಎಸ್. ಮೋಹನ್ ಅವರಿಗೆ ಸೇರಿದ ಅಡಿಕೆ ತೋಟದಲ್ಲಿನ 40ಕ್ಕೂ ಹೆಚ್ಚು ಫಸಲಿಗೆ ಬಂದಿದ್ದ ಅಡಿಕೆ ಮರಗಳು ಉರುಳಿ ಬಿದ್ದರೆ, ಇದೇ ಗ್ರಾಮದ ಗಿರೀಶಪ್ಪ ಎಂಬುವರಿಗೆ ಸೇರಿದ ಅಡಿಕೆ ಶೆಡ್ ಗಾಳಿಗೆ ಹಾರಿ ಹೋಗಿದೆ. ಜೊತೆಗೆ ಎರಡು ವಿದ್ಯುತ್ ಕಂಬಗಳು ಧರೆಗುರುಳಿವೆ.

ಕಾಗಳಗೆರೆ ಗ್ರಾಮದಲ್ಲಿ ಸುರಿದ ಅಧಿಕ ಮಳೆಯಿಂದಾಗಿ ಚರಂಡಿ ನೀರು ಮನೆಗೆ ನುಗ್ಗಿದ್ದು, ಭಾರಿ ಅವಾಂತರಗಳು ಸೃಷ್ಟಿಯಾಗಿವೆ. ವಿಷಯ ತಿಳಿದ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಎಂ.ಬಿ. ಸಿದ್ಧೇಶ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಚರಂಡಿಯನ್ನು ಸ್ವಚ್ಛಗೊಳಿಸಿ, ನೀರು ಬೇರೆಡೆಗೆ ಹರಿಯುವಂತೆ ಮಾಡಬೇಕೆಂದು ಪಿಡಿಒಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-44-1035889430

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.