ಹೊಸದುರ್ಗ: ತಾಲ್ಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಕರಿಯಮ್ಮ ದೇವಿ ಹಾಗೂ ಕಂಚೀಪುರದ ಕಂಚಿ ವರದರಾಜ ಸ್ವಾಮಿ ಮುಳ್ಳು ಪಾದುಕೆ ಸೇವೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಮಂಗಳವಾರ ಕರಿಯಮ್ಮ ದೇವಿ ಹಾಗೂ ಕಂಚಿ ವರದರಾಜ ಸ್ವಾಮಿ ಕೂಡು ಭೇಟಿ ನಡೆಯಿತು. ನಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಹಾಗೂ ಸಿಡಿ ಉತ್ಸವ ವೈಭವಯುತವಾಗಿ ನೆರವೇರಿತು.

ಬುಧವಾರ ಮುಳ್ಳು ಪಾದುಕೆ ಸೇವೆ (ಮುಳ್ಳಾವಿಗೆ) ಅಂಗವಾಗಿ ಕರಿಯಮ್ಮ ಹಾಗೂ ಕಂಚಿ ವರದರಾಜ ಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ ನಂತರ ಮಹಾಮಂಗಳಾರತಿ ನಡೆಯಿತು. ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವರುಗಳನ್ನು ಕಂಚಿ ವರದರಾಜ ಸ್ವಾಮಿ ಮೂಲ ದೇವಾಲಯಕ್ಕೆ ಸಕಲ ವಾದ್ಯಗೋಷ್ಠಿಗಳ ಮೂಲಕ ಕರೆತರಲಾಯಿತು. ಉಭಯ ದೈವಗಳು ನರ್ತಿಸುತ್ತಾ ನಾ ಮುಂದು, ತಾ ಮುಂದು ಎಂದು ಬರುತ್ತಾ, ಪುನಃ ಹಿಂದುರುಗುವ ದೃಶ್ಯ ನೋಡುಗರಲ್ಲಿ ರೋಮಾಂಚನ ಮೂಡಿಸುವಂತಿತ್ತು.

ನಾಣ್ಯಪ್ರಿಯ ಕಂಚಿ ವರದರಾಜ ಸ್ವಾಮಿಗೆ ಹರಕೆ ಹೊತ್ತ ಭಕ್ತರು ನಾಣ್ಯ ಅರ್ಪಿಸಿದರು. ಸ್ವಾಮಿಯು ಮುಳ್ಳು ಪಾದುಕೆ ಸಮೀಪ ಹೋಗುವುದು, ಹಿಂದಿರುಗುವುದು, ಸುತ್ತುವರಿಯುವುದನ್ನು ನೋಡುತ್ತಾ ಭಕ್ತರು ಮೈಮರೆತಿದ್ದರು. ನಂತರ ದೇವರು ಮುಳ್ಳಿನ ಪಾದುಕೆ ತುಳಿಯುವ ಮೂಲಕ ಮುಳ್ಳು ಪಾದುಕೆ ಸೇವೆ ಪೂರೈಸಿತು. ನಂತರ ದೇವರುಗಳನ್ನು ದೇವಾಲಯದ ಸಮೀಪ ಇರಿಸಲಾಯಿತು.

ಗುರುವಾರ ಕಂಚಿ ವರದರಾಜ ಸ್ವಾಮಿ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿನ ಪ್ರತಿಯೊಬ್ಬ ಭಕ್ತರ ಮನೆಗೆ ಹೋಗಿ, ಮಡಿಲಕ್ಕಿ ಸ್ವೀಕರಿಸಲಿದೆ.

ಮುಳ್ಳು ಪಾದುಕೆ ಸೇವೆ ನೋಡಲು ಚಿಕ್ಕಬ್ಯಾಲದಕೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ದೇವರ ದರ್ಶನ ಪಡೆದು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-44-2010458159

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.