ಶುದ್ಧ ಕುಡಿಯುವ ನೀರು, ಬೀದಿದೀಪ, ರಸ್ತೆ, ನೈರ್ಮಲ್ಯ ಸೇರಿದಂತೆ ಹಲವು ಮೂಲಸೌಕರ್ಯ ಒದಗಿಸಲು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ..
ವೆಂಕಟೇಶ್‌ರೆಡ್ಡಿ, ಗ್ರಾಮಸ್ಥ, ಚಿಕ್ಕಹಳ್ಳಿ
ಚಿಕ್ಕಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ರಸ್ತೆ ತಡೆ ನಡೆಸಿದ್ದೇವೆ. ನೆಪಮಾತ್ರಕ್ಕೆ ಪ್ರಮುಖ ರಸ್ತೆಯ ತಗ್ಗು, ಗುಂಡಿ ಮುಚ್ಚಿದ ಗುತ್ತಿಗೆದಾರರು ಬಿಲ್ ಪಡೆದರು. ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ.