ಚಿಕ್ಕಜಾಜೂರು: ರಾಗಿ ಖರೀದಿ ಕೇಂದ್ರದಲ್ಲಿ ರೈತರ ನೊಂದಣಿ ಕಾರ್ಯ ನ. 10 ರಿಂದ ಆರಂಭವಾಗಿದೆ. ಇಲ್ಲಿನ ಕೃಷಿ ಉಪ ಮಾರುಕಟ್ಟೆ ಕೇಂದ್ರದಲ್ಲಿ ಹೊಳಲ್ಕೆರೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತು ನೋಂದಣಿ ಮಾಡಿಸುತ್ತಿರುವುದು ಕಂಡು ಬಂದಿತು.

ಗುರುವಾರ ಸಂಜೆ ವೇಳೆಗೆ ಒಟ್ಟು 400 ರೈತರು ನೊಂದಣಿ ಮಾಡಿಸಿದ್ದಾರೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಕ್ವಿಂಟಾಲ್ಗೆ ₹ 4,886 ರಂತೆ ನಿಗದಿ ಪಡಿಸಿದೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ಗೆ ₹ 4290 ರಂತೆ ಖರೀದಿಸಲಾಗಿತ್ತು. ಈ ವರ್ಷ ಪ್ರತಿ ಕ್ವಿಂಟಾಲ್ಗೆ ₹ 596 ಹೆಚ್ಚಳ ಮಾಡಲಾಗಿದ್ದು, ಎಲ್ಲಾ ವರ್ಗದ (ಸಣ್ಣ, ಅತಿ ಸಣ್ಣ ಹಾಗೂ ದೊಡ್ಡ) ರೈತರು ಎಕರೆಗೆ 10 ಕ್ವಿಂಟಾಲ್ನಂತೆ, ಗರಿಷ್ಠ 50 ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ತಾಲ್ಲೂಕಿನ ರೈತರು ಹೆಚ್ಚು ರಾಗಿ ಬೆಳೆದಿರುವುದರಿಂದ ಕಳೆದ ವರ್ಷಕ್ಕಿಂತ ಈ ಬಾರಿ 30 ಕ್ವಿಂಟಾಲ್ನಷ್ಟು ಹೆಚ್ಚು ರಾಗಿ ಖರೀದಿಸುವಂತೆ ಸರ್ಕಾರ ಆದೇಶ ನೀಡಿದ್ದು, ರೈತರಿಗೆ ಅನುಕೂಲವಾಗಲಿದೆ.

ಡಿ. 15ಕ್ಕೆ ನೊಂದಣಿ ಕಾರ್ಯ ಮುಕ್ತಾಯಗೊಳ್ಳಲಿದ್ದು, ರೈತರು ಖುದ್ದು ಹಾಜರಾಗಿ, ನಿಗದಿ ಪಡಿಸಿದ ದಾಖಲೆಗಳೊಂದಿಗೆ ನೋಂದಣಿ ಮಾಡಿಸಬೇಕು. 2026 ಜನವರಿ 1 ರಿಂದ ಖರೀದಿ ಕೇಂದ್ರದಲ್ಲಿ ರಾಗಿ ಖರೀದಿಯನ್ನು ಆರಂಭಿಸಲಾಗುವುದು. 2026 ಮಾರ್ಚ್ 31ರ ಒಳಗೆ ರೈತರು ರಾಗಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವಂತೆ ಉಪ ಮಾರುಕಟ್ಟೆಯ ಖರೀದಿ ಕೇಂದ್ರದ ಹಿರಿಯ ಸಹಾಯಕ ಅಧಿಕಾರಿ ಎಂ.ಎಂ. ಮಲ್ಲನ ಗೌಡರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.