ಚಿಕ್ಕಜಾಜೂರು: ಚಿಕ್ಕಜಾಜೂರು ಸೇರಿದಂತೆ ಬಿ. ದುರ್ಗ ಹೋಬಳಿಯ ಬಹುತೇಕ ಕಡೆಗಳಲ್ಲಿ ಭಾನುವಾರ ಮುಂಜಾನೆ ದಟ್ಟ ಮಂಜು ಮುಸುಕಿದ ವಾತಾವರಣ ಕಂಡುಬಂದಿತು. ಮುಂಜಾನೆ 6ರಿಂದ 8ರವರೆಗೂ ರಸ್ತೆ, ತೋಟಗಳು ಮಂಜಿನಿಂದ ಆವರಿಸಿದ್ದವು. ವಾಹನ ಸವಾರರು ದೀಪ ಹಾಕಿಕೊಂಡು ಸಂಚರಿಸಿದರು.

ತೋಟದ ಬೆಳೆಗಾರರಲ್ಲಿ ಆತಂಕ: ಕಳೆದ ಶುಕ್ರವಾರವೂ ಇಬ್ಬನಿ ಬಿದ್ದಿತ್ತು. ಇದಾದ ಎರಡು ದಿನಗಳ ಅಂತರದಲ್ಲಿ ಮತ್ತೆ ದಟ್ಟ ಮಂಜು ಆವರಿಸಿತ್ತು. ಈಗ ಮತ್ತೆ ದಟ್ಟವಾದ ಮಂಜು ಆವರಿಸಿದ್ದು, ತೋಟಗಾರಿಕೆ ಬೆಳೆಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.

ಮಾವು, ಅಡಿಕೆ ಮತ್ತು ತೆಂಗಿನ ಮರಗಳಲ್ಲಿನ ಹರಳು ಹಾಗೂ ಈಚುಗಳಿಗೆ ಹಾನಿಯಾಗುವ ಭೀತಿ ಮೂಡಿದೆ. ಕಳೆದ ವರ್ಷ ಮಾವಿನಿಂದ ನಿರೀಕ್ಷಿತ ಇಳುವರಿ ಮತ್ತು ಆದಾಯ ಸಿಗಲಿಲ್ಲ. ಈ ಬಾರಿ ಮಾವು ಸಮೃದ್ಧವಾಗಿ ಹೂ ಬಿಟ್ಟು, ಈಚುಗಳಾಗುತ್ತಿವೆ. ಇಬ್ಬನಿಯಿಂದಾಗಿ ಈಚು ಉದುರುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಕಡೂರು, ಹಿರೇಎಮ್ಮಿಗನೂರು, ಚಿಕ್ಕಜಾಜೂರಿನ ರೈತರಾದ ಅನಂತಪ್ಪ, ಶ್ರೀನಿವಾಸ್, ಓಂಕಾರಪ್ಪ, ಮಂಜುನಾಥ್, ರಘು, ಎಂ. ಲೋಕೇಶ್ ಮತ್ತಿತರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.