ಚಿಕ್ಕಜಾಜೂರು: ಸಾಸಲು ಗ್ರಾಮದ ಹೊರವಲಯದಲ್ಲಿ ಶನಿವಾರ ಮಿನಿ ಟ್ಯಾಂಕರ್ನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕಿಟ್ ಆಗಿ ಎಂಜಿನ್ ಸುಟ್ಟು ಹೋಗಿದೆ.

ಸಮೀಪದ ಸಾಸಲು ಹಳ್ಳದ ಬಂಕ್ನಿಂದ ಟ್ಯಾಂಕರ್ನಲ್ಲಿ 8,000 ಲೀಟರ್ ಡೀಸೆಲ್ ತುಂಬಿಕೊಂಡು ನಾರಾಯಣ್ ಮೈನ್ಸ್ಗೆ ಹೋಗುತ್ತಿದ್ದಾಗ ಭೂತಪ್ಪ ಸ್ವಾಮಿ ದೇವಸ್ಥಾನದ ಸಮೀಪ ಅವಘಡ ಸಂಭವಿಸಿದೆ. ಟ್ಯಾಂಕರ್ ಚಾಲಕ, ಸೂಪರ್ವೈಸರ್ ಬಸವರಾಜ್ ಸೇರಿದಂತೆ ಮೂವರು ತಕ್ಷಣ ಕೆಳಗಿಳಿದಿದ್ದಾರೆ.

ಎಂಜಿನ್ಗೆ ಬೆಂಕಿ ತಗುಲಿದ ವಿಷಯ ತಿಳಿಯುತ್ತಿದ್ದಂತೆ ಹೊಳಲ್ಕೆರೆಯ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾಹುತವಾಗಿಲ್ಲ.

‘ಬೆಂಕಿಯು ಹಿಂದಿನ ಟ್ಯಾಂಕ್ಗೆ ಹಬ್ಬಿದ್ದರೆ ಭಾರಿ ಅವಘಡವಾಗುತ್ತಿತ್ತು. ಬೆಂಕಿ ನಂದಿಸುವವರೆಗೆ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು’ ಎಂದು ಸ್ಥಳೀಯರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-44-618813796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.