ಚಿಕ್ಕಜಾಜೂರು: ತಿಂಗಳಿಂದ ಬಿಸಿಲಿನ ತಾಪ ಹೆಚ್ಚಿದ್ದು, ವಾರದ ಸಂತೆಯ ವ್ಯಾಪಾರ ಕುಸಿತ ಕಂಡಿದೆ. ಸಂತೆ ವ್ಯಾಪಾರಿಗಳು ಖರೀದಿದಾರರಿಲ್ಲದೆ, ಸಂಜೆವರೆಗೂ ಸುಮ್ಮನೆ ಕುಳಿತಿದ್ದ ದೃಶ್ಯ ಚಿಕ್ಕಜಾಜೂರಿನ ಸಂತೆ ಮಾರುಕಟ್ಟೆಯಲ್ಲಿ ಕಂಡು ಬಂದಿತು.

ಚಿಕ್ಕಜಾಜೂರಿನಲ್ಲಿ ಪ್ರತಿ ಸೋಮವಾರ ವಾರದ ಸಂತೆ ನಡೆಯುತ್ತದೆ. ಇಲ್ಲಿಗೆ ಸುತ್ತಮುತ್ತಲಿನ 45ರಿಂದ 50ಕ್ಕೂ ಹೆಚ್ಚು ಹಳ್ಳಿಗಳ ಜನರು ವ್ಯಾಪಾರ ಹಾಗೂ ಖರೀದಿಗೆ ಬರುತ್ತಾರೆ. ಆದರೆ, ಒಂದು ತಿಂಗಳಿಂದ ಬೆಳಿಗ್ಗೆಯಿಂದ ಸಂಜೆ 4ರವರೆಗೂ ವಿಪರೀತ ಬಿಸಿಲಿನ ತಾಪಮಾನವಿರುವುದರಿಂದ, ಗ್ರಾಹಕರು ಸಂತೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಸಂತೆ ಮೈದಾನದಲ್ಲಿ ಬಿಸಿಲು ಹಾಗೂ ಮಳೆ ಬೀಳದಂತೆ ಸುವ್ಯವಸ್ಥಿತವಾದ ಚಾವಣಿ ವ್ಯವಸ್ಥೆ ಇದೆ. ಮುಂಜಾನೆ 6ರಿಂದಲೇ ವ್ಯಾಪಾರಿಗಳು ಬಂದು ವ್ಯಾಪಾರದ ವಸ್ತುಗಳನ್ನು ಜೋಡಿಸಿಕೊಳ್ಳುತ್ತಾರೆ. ಆದರೆ, ಮೂರು ವಾರಗಳಿಂದ ಸಂಜೆ ನಾಲ್ಕರ ವರೆಗೆ ಗ್ರಾಹಕರು ಬರುವುದೇ ವಿರಳವಾಗಿದೆ.

‘ಬೆಳಿಗ್ಗೆಯಿಂದ ಸಂಜೆವರೆಗೆ ಬೆರಳೆಣಿಕೆಯಷ್ಟು ಜನ ಖರೀದಿಗೆ ಬರುತ್ತಾರೆ. ಅದೂ, ಚಿಕ್ಕಜಾಜೂರಿನ ಗ್ರಾಹಕರು ಮಾತ್ರ. ಬೇರೆ ಊರಿನವರು ಬರುವುದು ಸಂಜೆಯಾಗುತ್ತದೆ. ಒಮ್ಮೆಗೆ ಜನರು ಬರುವುದರಿಂದ ವ್ಯಾಪಾರ ಮಾಡುವುದು ಕಷ್ಟವಾಗುತ್ತಿದೆ’ ಎನ್ನುತ್ತಾರೆ ವ್ಯಾಪಾರಿಗಳಾದ ಸಿದ್ಧಪ್ಪ, ಮಂಜಣ್ಣ, ಪ್ರೇಮಕ್ಕ, ಅಸೀಫ್ ಮೊದಲಾದವರು.

ಬೆಳಿಗ್ಗೆಯಿಂದ ನಾಲ್ಕು ಗಂಟೆವರೆಗೆ ಕೇವಲ 20ರಿಂದ 25 ಕೆ.ಜಿ.ಯಷ್ಟು ನೀರುಳ್ಳಿ ಮಾರಾಟ ಮಾಡಿದ್ದೇವೆ. ಸಂಜೆ ಹತ್ತಾರು ಜನ ಒಮ್ಮೆಗೆ ಖರೀದಿಗೆ ಬರುವುದರಿಂದ ಒತ್ತಡ ಜಾಸ್ತಿಯಾಗುತ್ತದೆ. ಅವರಸರದಲ್ಲಿ ನಷ್ಟವೂ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳಾದ ಅಸೀಫ್, ದಾದಪೀರ್, ಬಸೀರ್ ಮೊದಲಾದವರು.

ಇನ್ನು ಸೊಪ್ಪು, ತರಕಾರಿ, ವಿಳ್ಯೆದೆಲೆ ವ್ಯಾಪಾರಿಗಳ ಸ್ಥಿತಿ ಭಿನ್ನ. ಬಿಸಿಲಿನ ತಾಪಕ್ಕೆ ಸೊಪ್ಪು, ತರಕಾರಿಗಳು ಬತ್ತಿ ಹೋಗುತ್ತವೆ.

‘ಗ್ರಾಹಕರು ಬತ್ತಿದ ಸೊಪ್ಪು, ವಿಳ್ಯೆದೆಲೆ, ತರಕಾರಿಗಳನ್ನು ತಿರಸ್ಕರಿಸಿ ಮುಂದೆ ಹೋಗುತ್ತಾರೆ. ಸೊಪ್ಪು, ಕೆಲವು ಹಸಿ ತರಕಾರಿಗಳಿಗೆ ನೀರಿನಲ್ಲಿ ಅದ್ದಿದ ಬಟ್ಟೆ ಹಾಗೂ ತೆಳು ಗೋಣಿ ಚೀಲಗಳನ್ನು ಮುಚ್ಚಿದ್ದರೂ, ಬಿಸಿಲಿನ ತಾಪಕ್ಕೆ ಬಾಡುತ್ತವೆ ಇದರಿಂದಾಗಿ ನಷ್ಟ ಅನುಭವಿಸುಂತಾಗಿದೆ’ ಎನ್ನುತ್ತಾರೆ ವ್ಯಾಪಾರಿಗಳಾದ ಜಯಪ್ಪ, ರೇಣುಕಯ್ಯ, ಮಂಜಮ್ಮ, ತಿಮ್ಮಕ್ಕ, ರುದ್ರಪ್ಪ, ಸಾವಿತ್ರಮ್ಮ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-44-1737138728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.