ಚಿಕ್ಕಜಾಜೂರು: ‘ರಾಜ್ಯದ ಕಾಂಗ್ರೆಸ್ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಲು ಹೊರ ಟಿರುವುದರಿಂದ ‘ಸಿ’ ವರ್ಗಗಳಿಗೆ ಮರಣ ಶಾಸನ ಬರೆದಂತಾಗುತ್ತದೆ’ ಎಂದು ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ಸಮೀಪದ ಗುಲಗಂಜಿಹಟ್ಟಿ ಲಂಬಾಣಿ ತಾಂಡಾದಿಂದ ಬಿ.ದುರ್ಗ ಮುಖ್ಯ ರಸ್ತೆವರೆಗೆ ₹ 1.5 ಕೋಟಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಒಳ ಮೀಸಲಾತಿ ಜಾರಿಯಿಂದ ಕೇವಲ ‘ಎ’ ಮತ್ತು ‘ಬಿ’ ವರ್ಗದ ಜಾತಿಗಳಿಗೆ ಅನುಕೂಲವಾಗುತ್ತದೆಯೇ ವಿನಃ, ಉಳಿದ ಜಾತಿಗಳಿಗೆ ಮೀಸಲಾತಿ ಮರಣ ಶಾಸನವಾಗುತ್ತದೆ. ಉಳಿದ ಜಾತಿಯಲ್ಲಿ ಎಷ್ಟೇ ಅಂಕ ಗಳಿಸಿದರೂ, ಮೀಸಲಾತಿ ಆಧಾರದಲ್ಲಿ ಉದ್ಯೋಗ ಪಡೆಯುವುದಿರಲಿ, ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟನ್ನು ಪಡೆಯುವುದಾಗಲಿ, ವಿದ್ಯಾರ್ಥಿ ವೇತನವನ್ನೂ ಪಡೆಯಲು ಆಗುವುದಿಲ್ಲ’ ಎಂದರು.

‘ಜಾತಿ ಮತ್ತು ವೋಟ್ ಬ್ಯಾಂಕ್ ರಾಜಕಾರಣವನ್ನು ನಾನು ಮಾಡುವುದಿಲ್ಲ. 493 ಹಳ್ಳಿಗಳ ಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇನೆ. ಪ್ರತಿಯೊಂದು ಜನಾಂಗಕ್ಕೂ ನ್ಯಾಯ ಒದಗಿಸುವುದು ನನ್ನ ಕರ್ತವ್ಯ’ ಎಂದು ಹೇಳಿದರು.

‘ಗುಲಗಂಜಿಹಟ್ಟಿ ಲಂಬಾಣಿ ತಾಂಡಾದಿಂದ ಬಿ.ದುರ್ಗ ಮುಖ್ಯ ರಸ್ತೆವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಈ ಮೊದಲು ₹ 50 ಲಕ್ಷ ನಿಗದಿಯಾಗಿತ್ತು. ಆದರೆ, ಇದು ಅರ್ಧ ರಸ್ತೆಗೂ ಆಗುವುದಿಲ್ಲ. ಆದ್ದರಿಂದ, ರಸ್ತೆ ಕಾಮಗಾರಿಗೆ ತಕ್ಷಣದಿಂದಲೇ ಹೆಚ್ಚುವರಿಯಾಗಿ ₹ 1 ಕೋಟಿ ನೀಡಲಾಗುವುದು. ಒಟ್ಟು ₹ 1.5 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಿಕೊಡುವೆ’ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ ನಾಯ್ಕ, ರುದ್ರೇಗೌಡ, ಎಂ. ದೇವರಾಜ್, ಡಿ.ಸಿ. ಮೋಹನ್, ರಮೇಶ್ನಾಯ್ಕ ಮಾತನಾಡಿದರು. ತಾಲ್ಲೂಕು ಬಂಜಾರ ಸಮಾಜದ ಕಾರ್ಯದರ್ಶಿ ಚಂದ್ರಾನಾಯ್ಕ, ಗೋವಿಂದನಾಯ್ಕ, ಕೃಷ್ಣನಾಯ್ಕ, ಪಿಡಿಒ ಎಸ್.ವಿ. ಪುನೀತ್, ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-44-1363804022

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.