ಚಿಕ್ಕಜಾಜೂರು: ಅಪರಿಚಿತ ವ್ಯಕ್ತಿಯೊಬ್ಬರು ಶನಿವಾರ ತಡರಾತ್ರಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಹೊಳಲ್ಕೆರೆ ರೈಲ್ವೆ ನಿಲ್ದಾಣ ಹಾಗೂ ರಾಮಗಿರಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ. ಮೀ. ನಂ–268/100–200 ರಲ್ಲಿ ಅಂದಾಜು 25–30 ವರ್ಷದ ಅಪರಿಚಿತ ಗಂಡಸಿನ ಶವವೊಂದು ಪತ್ತೆಯಾಗಿದೆ. ಮೃತನ ತಲೆಯ ಭಾಗವು ಜಜ್ಜಿ ಹೋಗಿದ್ದು, ಮುಖ ಚಹರೆ ಗುರುತಿಸಲು ಸಾಧ್ಯವಾಗಿಲ್ಲ. ಮೃತನು ಸಾಧಾರಣ ಮೈಕಟ್ಟು ಹೊಂದಿದ್ದು, 5.5 ಅಡಿ ಎತ್ತರವಿದ್ದಾನೆ. ಮೈ ಮೇಲೆ ಆಕಾಶ ನೀಲಿ – ಕಪ್ಪು ಬಣ್ಣದ ಉದ್ದ ತೋಳಿನ ಟೀ ಶರ್ಟ್ ಹಾಗೂ ಅರ್ಧ ತೋಳಿನ ಶರ್ಟ್ ಧರಿಸಿದ್ದು, ಸಿಮೆಂಟ್ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾನೆ. ಎಡಗೈಯಲ್ಲಿ ಫಾಸ್ಟ್ಟ್ರ್ಯಾಕ್ ಕಂಪನಿಯ ವಾಚ್ ಇದೆ.

ಮೃತನ ವಾರಸುದಾರರ ಬಗ್ಗೆ ಯಾರಿಗಾದರೂ ತಿಳಿದು ಬಂದಲ್ಲಿ, ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ 99007 54363, 9480802123, 08192259643 ಅಥವಾ 9480802147ಗೆ ಸಂಪರ್ಕಿಸಲು ಚಿಕ್ಕಜಾಜೂರು ರೈಲ್ವೆ ಉಪ ಪೊಲೀಸ್ ಠಾಣೆ ಸಿಬ್ಬಂದಿ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-44-86110434

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.