ಚಿಕ್ಕಜಾಜೂರು: ಎರಡು ತಿಂಗಳಿಂದ ದಿನೇದಿನೇ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೇ ಇದ್ದು, ಪರಿಣಾಮವಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರು ಬರದೇ ತೋಟದ ಬೆಳೆಗಾರರು ಕಂಗಾಲಾಗಿದ್ದಾರೆ.

ಮೇ ತಿಂಗಳು ಕಾಲಿಟ್ಟರೂ ಮಳೆ ಸುರಿಯದ್ದರಿಂದ ಬಿ. ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ತೋಟಗಳಲ್ಲಿನ ಅಡಿಕೆ ಮರಗಲು ಒಣಗುತ್ತಿವೆ. ಏಪ್ರಿಲ್ನಲ್ಲಿ ರೈತರು ಹನಿ ನೀರಾವರಿ ಮೂಲಕ ಅಡಿಕೆ ತೋಟಗಳಿಗೆ ನೀರುಣಿಸಿದರು. ಆಗ ಏಕ ಕಾಲದಲ್ಲಿ 6ರಿಂದ 8 ವಾಲ್ವ್ಗಳ ಮೂಲಕ ಅಡಿಕೆ ಮರಗಳಿಗೆ ನೀರನ್ನು ಹಾಯಿಸುತ್ತಿದ್ದರು. ಈಗ ಅವುಗಳ ಸಂಖ್ಯೆ 3ರಿಂದ 4 ಕ್ಕೆ ಇಳಿದಿದೆ.

ಕೊಳವೆಬಾವಿಗಳ ಬತ್ತಿದ್ದರಿಂದ ಜಮೀನುಗಳಲ್ಲಿ ರೈತರು ಮತ್ತೆ 800ರಿಂದ 900 ಅಡಿ ಆಳದವರೆಗೆ ಕೊಳವೆ ಬಾವಿಗಳನ್ನು ಕೊರೆಸುತ್ತಿರುವುದು ಸಾಮಾನ್ಯವಾಗಿದೆ.

ಗುಂಜಿಗನೂರು, ಹಿರಿಯೂರು, ಮಲ್ಲೇನಹಳ್ಳಿ, ಹಿರೇಕಂದವಾಡಿ ಮೊದಲಾದ ಕಡೆಗಳಲ್ಲಿನ ಬಹುತೇಕ ಕೊಳವೆ ಬಾವಿಗಳು ಬರಿದಾಗಿದ್ದು, ರೈತರು ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ನೀರನ್ನು ಅವಲಂಬಿಸುವಂತಾಗಿದೆ.

600ರಿಂದ 700 ಅಡಿ ಆಳದಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣಿಸಿಕೊಂಡರೂ, ನಂತರ 10ರಿಂದ 20 ಅಡಿ ಆಳಕ್ಕೆ ಹೋಗುತ್ತಲೇ ಮತ್ತೆ ದೂಳು ಹೊರಬರುತ್ತದೆ ಎನ್ನುತ್ತಾರೆ ರೈತರಾದ ಚಿಕ್ಕಜಾಜೂರಿನ ಪಿ.ಜಿ. ಪವನ್, ದೀಪಕ್, ಹಿರೇಕಂದವಾಡಿ ಬಿ.ಆರ್. ಈಶ್ವರಪ್ಪ, ಚಿಕ್ಕಂದವಾಡಿ ಜಯಪ್ಪ, ಮೂರ್ತಿ, ಆನಂದಪ್ಪ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-44-1308548502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.