ಚಿಕ್ಕಜಾಜೂರು: ಹೋಬಳಿಯ ಬಹುತೇಕ ಪಡಿತರ ವಿತರಣಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಇದ್ದು, ಇದರಿಂದ ಫಲಾನುಭವಿಗಳು ಹೈರಾಣಾಗಿದ್ದಾರೆ. ಮಧ್ಯಾಹ್ನದವರೆಗೂ ಸಾಲಿನಲ್ಲಿ ನಿಂತು ಕಾದರೂ ಪಡಿತರ ಪಡೆಯಲು ಸಾಧ್ಯವಾಗದೆ ಬರಿಗೈಯಲ್ಲಿ ಮನೆಗೆ ಮರಳುತ್ತಿದ್ದಾರೆ.

ಒಬ್ಬ ಫಲಾನುಭವಿಯ ಮಾಹಿತಿ ಪಡೆದುಕೊಳ್ಳಲು 10–15 ನಿಮಿಷ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಜಾಜೂರಿನ ಎಂಸಿಎಸ್ (ಮಹಿಳಾ ಸ್ವಸಹಾಯ ಸಂಘ) ವಿತರಣಾ ಕೇಂದ್ರ ಸೇರಿ ಚನ್ನಪಟ್ಟಣ, ಕಾವಲಹಟ್ಟಿ, ರಂಗೇನಹಳ್ಳಿ ಗ್ರಾಮದ ನೂರಾರು ಪಡಿತರದಾರರೂ ಮನೆ, ಕೆಲಸಗಳನ್ನು ಬಿಟ್ಟು ದಿನಗಟ್ಟಲೆ ಕಾದರೂ ಪಡಿತರ ಪಡೆಯಲು ಸಾಧ್ಯವಾಗುತ್ತಿಲ್ಲ.

ಸರ್ಕಾರ ಈ ಬಗ್ಗೆ ಗಮನ ಹರಿಸಿ, ಆದಷ್ಟು ಬೇಗ ಸರ್ವರ್ ಸಮಸ್ಯೆ ಬಗೆಹರಿಸಬೇಕು ಎಂದು ಮಂಜಮ್ಮ, ಲಕ್ಷ್ಮೀದೇವಿ, ರತ್ನಮ್ಮ, ಮಮತಾ, ತಿಮ್ಮಣ್ಣ, ರಾಜಪ್ಪ ಹಾಗೂ ಮೊದಲಾದವರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-44-1372631255

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.