ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಿಕಾರಥ’ದಲ್ಲಿ ಮಕ್ಕಳ ಮೆರವಣಿಗೆ

Last Updated 17 ಮೇ 2022, 4:14 IST
ಅಕ್ಷರ ಗಾತ್ರ

ಹಿರಿಯೂರು:ತಾಲ್ಲೂಕಿನ ಬಗ್ಗನಡು ಗ್ರಾಮದ ಸರ್ಕಾರಿ ಶಾಲೆಯ ಪ್ರಾರಂಭೋತ್ಸವದಲ್ಲಿಅಲಂಕರಿಸಿದ ಎತ್ತಿನ ಬಂಡಿಯಲ್ಲಿ ಪುಟಾಣಿ ಮಕ್ಕಳ ಮೆರವಣಿಗೆ ನಡೆಯಿತು.

ಮಕ್ಕಳಿಗೆಶಾಸಕಿ ಪೂರ್ಣಿಮಾ ಶ್ರೀನಿವಾಸ್,ಬಿಇಒ ನಾಗಭೂಷಣ್ ಸಾಥ್‌ ನೀಡಿ ಗಮನ ಸೆಳೆದರು.

ಮಕ್ಕಳ ಮೆರವಣಿಗೆ ಗ್ರಾಮಕ್ಕೆ ಹಬ್ಬದ ಕಳೆ ತಂದಿತ್ತು.

‘ಸರ್ಕಾರ ಸರ್ಕಾರಿ ಶಾಲೆಗಳಿಗೂ ಇಂಗ್ಲಿಷ್ ಮಾಧ್ಯಮ ತರಗತಿಗೆ ಅನುಮತಿ ನೀಡುತ್ತಿದೆ. ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ’ ಎಂದು ಶಾಸಕರು ಮನವಿ ಮಾಡಿದರು.

‌‘ಶಾಲೆಗೆ ಶೀಘ್ರದಲ್ಲೇ ಕೊಳವೆಬಾವಿ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಬಿಆರ್‌ಸಿ ತಿಪ್ಪೇರುದ್ರಪ್ಪ, ಇಸಿಒ ಗಿರೀಶ್, ಬಿಆರ್‌ಪಿ ಪ್ರಸನ್ನಕುಮಾರ್, ಸಿಆರ್‌ಪಿ ವೀರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಭೂಷಣ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್, ಮುಖ್ಯಶಿಕ್ಷಕ ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT