ನಾಯಕನಹಟ್ಟಿ: ಸಮೀಪದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಸಾರ್ವಜನಿಕರು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.

ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಷ್ಠಲಗುಮಿ, ಮಲ್ಲೇಬೋರನಹಟ್ಟಿ, ಚೌಳಕೆರೆ, ಕೊರಡಿಹಟ್ಟಿ, ತೊರೆಕೋಲಮ್ಮನಹಳ್ಳಿ, ಗುಂತಕೋಲಮ್ಮನಹಳ್ಳಿ ಗ್ರಾಮಗಳಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ, ಎಲ್ಲಾ ಗ್ರಾಮಗಳಲ್ಲೂ ಸ್ವಚ್ಛತೆ ಮತ್ತು ನೈರ್ಮಲ್ಯ ಮರೀಚಿಕೆಯಾಗಿದೆ. ಗ್ರಾಮದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿ ಕಟ್ಟಿಕೊಂಡಿವೆ. ಇದರಿಂದ ಕೊಳಚೆ ನೀರು ಮುಂದೆ ಸಾಗದೆ ನಿಂತಲ್ಲೇ ನಿಂತು ದುರ್ನಾತ ಬೀರುತ್ತಿದೆ.

ಗ್ರಾಮ ಪಂಚಾಯಿತಿ ಕಚೇರಿಯ ಸಮೀಪದಲ್ಲಿರುವ ಚರಂಡಿಯಲ್ಲಿ ಹುಲ್ಲು ಬೆಳೆದು ತಿಂಗಳುಗಳೇ ಕಳೆದಿದ್ದು, ಸ್ವಚ್ಛತೆಯಿಲ್ಲದೆ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಆದರೂ ಸ್ವಚ್ಛತೆಗೆ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಇಕ್ಕೆಲಗಳಲ್ಲಿ ಜಾಲಿ ಗಿಡ, ಪಾರ್ಥೇನಿಯಂ ಬೆಳದಿವೆ. ಇತ್ತೀಚಿಗೆ ಕಸ ತೆರವು ಮಾಡಿದ್ದರೂ ಪೂರ್ಣ ಕೆಲಸವಾಗಿಲ್ಲ. ಮುಷ್ಠಲಗುಮ್ಮಿ ಗ್ರಾಮದಲ್ಲಿರುವ ಬಹುತೇಕ ಚರಂಡಿಗಳು ಸ್ವಚ್ಛತೆಯನ್ನೇ ಎದುರು ನೋಡುತ್ತಿವೆ.

ಒಮ್ಮೆ ಚರಂಡಿ ಸ್ವಚ್ಛಗೊಳಿಸಿದರೆ ಆರು ತಿಂಗಳಾದರೂ ಮತ್ತೆ ಸ್ವಚ್ಛ ಮಾಡಲು ಬರುವುದಿಲ್ಲ ಎಂಬುದು ಗ್ರಾಮಸ್ಥರ ಆರೋಪ. ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಮೇಲೇ ಚರಂಡಿ ನೀರು ಹರಿಯುತ್ತದೆ. ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಹಾದುಹೋಗಿದ್ದು, ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತದೆ. ಸಾರ್ವಜನಿಕರು, ವಾಹನ ಸವಾರರು ಜೋರಾಗಿ ಹೋದರೆ ರಸ್ತೆ ಮೇಲೆ ಹರಿಯುವ ಚರಂಡಿ ನೀರಿನ ಸಿಂಚನವಾಗುತ್ತದೆ. ಇದರಿಂದ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಶಾಪ ಹಾಕುತ್ತಿದ್ದಾರೆ.

ಸ್ವಚ್ಛತೆಯ ಜೊತೆಗೆ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಬೀದಿದೀಪಗಳು, ಹೈಮಾಸ್ಟ್ ದೀಪಗಳು ಕೆಟ್ಟುಹೋಗಿ ತಿಂಗಳುಗಳೇ ಕಳೆದರೂ ಬದಲಾಯಿಸುವ ಕಾರ್ಯವಾಗಿಲ್ಲ. ಸಾರ್ವಜನಿಕರು ರಾತ್ರಿಯಾದರೆ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಡಿಎಸ್ಎಸ್ ಸಂಚಾಲಕ ಟಿ.ಮಹಾಂತೇಶ್ ಆಕ್ರೋಶ ವ್ಯಕ್ತಪಡಿಸಿದರು.

ಏಳು ಗ್ರಾಮಗಳಿಗೆ ಒಬ್ಬರೇ ಸಿಬ್ಬಂದಿ

ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳಿಗೆ ಒಬ್ಬರೇ ಸ್ವಚ್ಛತಾ ಸಿಬ್ಬಂದಿ ಇದ್ದಾರೆ. ಒಬ್ಬರೇ ಚರಂಡಿಯ ಸ್ವಚ್ಛತೆ, ತ್ಯಾಜ್ಯ ತೆರವುಗೊಳಿಸುವ ಕೆಲಸ ಮಾಡಬೇಕು. ಏಳು ಗ್ರಾಮದಲ್ಲಿರುವ 30ರಿಂದ 40 ಚರಂಡಿಗಳನ್ನು ಸ್ವಚ್ಛಗೊಳಿಸಲು ಹೈರಾಣಾಗುತ್ತಿದ್ದಾರೆ. ಹೆಚ್ಚುವರಿಯಾಗಿ ಸಿಬ್ಬಂದಿ ನೇಮಿಸಿಕೊಳ್ಳಲು ಗ್ರಾಮ ಪಂಚಾಯಿತಿಗೆ ಅಧಿಕಾರವಿಲ್ಲ. ಇದರಿಂದ ಇಡೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿ ಸಾಂಕ್ರಾಮಿಕ ರೋಗಗಳ ತಾಣವಾಗುತ್ತಿದೆ.

ಈ ಬಗ್ಗೆ ಪಂಚಾಯಿತಿ ಆಡಳಿತಕ್ಕೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ತೊರೆಕೊಲಮ್ಮನ ಹಳ್ಳಿ ಗ್ರಾಮಸ್ಥರಾದ ಕೆ.ಟಿ.ಕೃಷ್ಣಪ್ಪ, ತಿಮ್ಮಾಶೆಟ್ಟಿ, ಕೆ.ಜಿ. ವೆಂಕಟೇಶ್, ಗಿರೀಶ್, ನಾಗರಾಜ್, ದುರುಗಪ್ಪ, ಆರ್.ಬಸಪ್ಪ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.