ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರು ಪರಿಶೀಲನೆಗೆ ವಕೀಲರ ಆಗ್ರಹ

ಜನನ ಮತ್ತು ಮರಣ ಪ್ರಮಾಣಪತ್ರ ಹೊಣೆ ಎಸಿಗೆ
Last Updated 27 ಜುಲೈ 2022, 2:32 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಜನನ ಮತ್ತು ಮರಣ ಪ್ರಮಾಣಪತ್ರವನ್ನು ನೀಡುವ ಹೊಣೆಯನ್ನು ನ್ಯಾಯಾಲಯದ ವ್ಯಾಪ್ತಿಗೆ ಮರು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳವಾರ ಇಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.

ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಕೀಲರು ನ್ಯಾಯಾಲಯ ಆವರಣದಿಂದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನೂತನ ತಾಲ್ಲೂಕು ಕಚೇರಿಗೆ ಆಗಮಿಸಿದರು.

ಇದುವರೆಗೆ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಜನರು ನ್ಯಾಯಾಲಯದಿಂದ ಪಡೆದುಕೊಳ್ಳ
ಬೇಕಿತ್ತು. ಈಗ ಜಿಲ್ಲಾ ಉಪವಿಭಾಗಾಧಿಕಾರಿಯಿಂದ ಪಡೆದುಕೊಳ್ಳಲು ಸರ್ಕಾರ ಆದೇಶಿಸಿದೆ. ಇದು ಅವೈಜ್ಞಾನಿಕವಾಗಿರುವ ಜತೆಗೆ ಜನರ ಸಮಯ, ಹಣ ವ್ಯರ್ಥವಾಗಲಿದೆ. ಕೂಡಲೇ ಈ ಬಗ್ಗೆ ಗಮನಹರಿಸಿ ಆದೇಶ ವಾಪಸ್ ಪಡೆದು ಹಳೆ ಪದ್ಧತಿ ಮುಂದುವರಿಸಬೇಕು ಎಂದು ಮನವಿ ಮಾಡಿದರು. ಶೀರಸ್ತೇದಾರ್ ಏಳುಕೋಟಿ ಮನವಿ ಸ್ವೀಕರಿಸಿದರು. ವಕೀಲರ ಸಂಘದ ಅಧ್ಯಕ್ಷ ಆರ್. ಆನಂದ್, ಉಪಾಧ್ಯಕ್ಷ ಡಿ. ಬಸವರಾಜ್, ಕಾರ್ಯದರ್ಶಿ ವಿ.ಡಿ. ರಾಘವೇಂದ್ರ, ಚಾಣಾಕ್ಯ, ಪರಮೇಶ್ವರಪ್ಪ, ರಾಮಾಂಜಿನೇಯ, ಅನಸೂಯ, ಸುರೇಶ್, ಒಳಮಠ್, ಹುಲಿಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT