ಚಿತ್ರದುರ್ಗ: ‘ಅಲ್ಲಮಪ್ರಭುಗಳ ಜೀವನ ಮತ್ತು ಸಾಧನೆ ಅತ್ಯಂತ ಅನನ್ಯವಾದದು. ಮಾತೃ ಹೃದಯದ ವಾತ್ಸಲ್ಯ, ಸೂಕ್ಷ್ಮತೆಯ ಕಾರಣದಿಂದಾಗಿಯೇ 12ನೇ ಶತಮಾನದ ಎಲ್ಲಾ ಶರಣರು ಅವರಿಗೆ ತಲೆಬಾಗುತ್ತಿದ್ದರು’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಗುರುವಾರ ಆಯೋಜಿಸಿದ್ದ ಅಲ್ಲಮಪ್ರಭುಗಳ ಶರಣೋತ್ಸವದಲ್ಲಿ ಮಾತನಾಡಿದ ಅವರು, ‘ಜ್ಞಾನ ವೈಚಾರಿಕತೆಯ ಪ್ರಾಜ್ಞನಾಗಿ ಶರಣರ, ಸಾಧಕರ ಮೇಲೆ ತನ್ನ ಆಳವಾದ ಪ್ರಭಾವ ಬೀರಿದರು. ಜತೆಗೆ ಶರಣ ಮಾರ್ಗಕ್ಕೆ ಗುರುವಾಗಿ ಅನುಭವ ಮಂಟಪದ ಅಧ್ಯಕ್ಷರಾದರೂ ಅಂತರ್ಮುಖಿಯಾಗಿ ಬದುಕಿದರು’ ಎಂದರು.

‘ಯಾವ ಕಟ್ಟುಪಾಡಿಗೂ ಒಳಗಾಗದೇ ಎಲ್ಲಾ ಮಾರ್ಗಗಳ, ಎಲ್ಲಾ ಪಂಥಗಳ, ಎಲ್ಲಾ ವ್ಯಕ್ತಿಗಳ ಗುಣಾಂಶವನ್ನು ಮೆಚ್ಚಿದರು. ಅಷ್ಟೇ ಅಲ್ಲದೇ ಅವಗುಣಗಳನ್ನು ಖಂಡಿಸಿದರು. ಅಲ್ಲಮನ ಆ ನಿಷ್ಠುರತೆಯ ಹಿಂದೆ ವೈಚಾರಿಕತೆಯ ಪ್ರಖರತೆ ಇತ್ತು’ ಎಂದು ಹೇಳಿದರು.

‘ಒಬ್ಬ ಸಾಹಿತಿ ಪ್ರಭುದೇವರನ್ನು ನೋಡುವ ದೃಷ್ಟಿಕೋನಕ್ಕೂ, ಒಬ್ಬ ಸ್ವಾಮೀಜಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಾಕೆಂದರೆ ಅಲ್ಲಮ ಈ ನೆಲದ ಬಹುದೊಡ್ಡ ತತ್ವಜ್ಞಾನಿ. ಜಗತ್ತಿನ ಧರ್ಮಗಳೆಲ್ಲ ಮತಗಳಾಗಿ, ಜಾತಿಗಳಾಗಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಮತವೇ ಬೇರೆ, ಧರ್ಮವೇ ಬೇರೆ ಎಂದು ಸಾಧಿಸಿ ತೋರಿಸಿದವರು ಅಲ್ಲಮ ಪ್ರಭುದೇವರು’ ಎಂದು ಸ್ಮರಿಸಿದರು.

‘ಅಲ್ಲಮಪ್ರಭುಗಳು ಹಲವು ಶರಣರನ್ನು ಪ್ರಭಾವಿಸಿದವರು. ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ದರಾಮರಿಗೆ ಕೈವಲ್ಯ ಜ್ಞಾನವನ್ನು ನೀಡಿದವರು’ ಎಂದು ನಿವೃತ್ತ ಪ್ರಾಂಶುಪಾಲ ಕೊಟ್ರೇಶ್ ತಿಳಿಸಿದರು.

ಬಸವ ಯಾದವಾನಂದ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಬಸವ ಮಹಾಂತ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಭಕ್ತರಾದ ಪೈಲ್ವಾನ್ ತಿಪ್ಪೇಸ್ವಾಮಿ, ನಾಗರಾಜ್ ಸಂಗಮ್, ಆನಂದ್, ಬಸವರಾಜ ಕಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-44-349327818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.