ಚಿತ್ರದುರ್ಗ: ಜಿಲ್ಲೆಯ ಅಧ್ಯಾತ್ಮ ಹಾಗೂ ವೈಚಾರಿಕ ಚಿಂತನೆಯ ತಾಣ ಎಂದೇ ಗುರುತಿಸಿಕೊಂಡಿರುವ ಶ್ರೀ ನೀಲಕಂಠೇಶ್ವರ ಸ್ವಾಮಿ ಸನ್ನಿಧಿಯ ಸಮುದಾಯ ಭವನದಲ್ಲಿ ಬಸವೇಶ್ವರ ಜಯಂತಿಯ ಸಂಭ್ರಮ ಮನೆಮಾಡಿದೆ. ಜಿಲ್ಲಾಡಳಿತ ಈ ಬಾರಿಯ ಬಸವ ಜಯಂತಿಯನ್ನು ಈ ಸಮುದಾಯ ಭವನದಲ್ಲೇ ಆಚರಿಸುತ್ತಿರುವುದು ಸಂಭ್ರಮ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ವೀರಶೈವ ಸಮಾಜದ ಸಹಯೋಗದೊಂದಿಗೆ ಬಸವ ಜಯಂತಿ ನಡೆಯುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ಟಿ.ರಘುಮೂರ್ತಿ, ಬಿ.ಜಿ.ಗೋವಿಂದಪ್ಪ, ಸಂಸದ ಗೋವಿಂದ ಕಾರಜೋಳ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಾಸಕ ಕೆ.ಸಿ.ವೀರೇಂದ್ರ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮ ಸಂಜೆ 4 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ನಂತರ ವೀರಶೈವ ಸಮುದಾಯದ ವತಿಯಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ಶಾಸಕ ಕೆ.ಸಿ.ವೀರೇಂದ್ರ ಉದ್ಘಾಟಿಸಲಿದ್ದಾರೆ. ಜಾನಪದ ಕಲಾ ಮೇಳಗಳಿಗೆ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಚಾಲನೆ ನೀಡಲಿದ್ದಾರೆ. ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅತಿಥಿಯಾಗಿ ಭಾಗವಹಿಸುವರು.

ದುರ್ಗದಲ್ಲಿ ನೀಲಕಂಠೇಶ್ವರ ಸ್ವಾಮಿ ಸನ್ನಿಧಿ ಎಂದರೆ ಧಾರ್ಮಿಕ ಹಾಗೂ ವೈಚಾರಿಕ ಚಿಂತನೆಗಳ ತಾಣವಾಗಿ ಗುರುತಿಸಿಕೊಂಡಿದೆ. ಯಾವುದೇ ಹೋರಾಟ, ಚಿಂತನೆಗಳು ನಡೆದರೂ ಅವುಗಳು ಇಲ್ಲಿಂದಲೇ ಆರಂಭವಾಗುತ್ತವೆ. ಈ ಧಾರ್ಮಿಕ ತಾಣದಲ್ಲಿ ಸಾಂಪ್ರದಾಯಿಕ ಆಚರಣೆಗಳ ಜೊತೆಗೆ ಬಸವೇಶ್ವರರ ಚಿಂತನೆಗಳನ್ನೂ ಕಾಪಿಟ್ಟುಕೊಂಡು ಬರಲಾಗಿದೆ. ವೀರಶೈವ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ನೀಲಕಂಠೇಶ್ವರ ಸನ್ನಿಧಿಯಲ್ಲಿ ಹಲವು ಜನೋಪಯೋಗಿ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಕೋಟೆ ನಗರಿಯಲ್ಲಿ ನಡೆಯುವ ಪ್ರತಿ ರಾಜಕೀಯ, ಸಾಮಾಜಿಕ ಚಟುವಟಿಕೆಗಳು ಈ ದೇವಾಲಯದಿಂದಲೇ ಆರಂಭವಾಗುತ್ತವೆ. ಮಹಾತ್ಮ ಗಾಂಧಿ ಪ್ರತಿಮೆ ದೇವಾಲಯದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಿರುವುದು ಕೂಡ ವಿಶೇಷ. ಗಾಂಧಿ ಪ್ರೇರಣೆಯಿಂದ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ ಎಸ್.ನಿಜಲಿಂಗಪ್ಪ ಅವರು ತಮ್ಮ ಕಾರ್ಯ ಚಟುವಟಿಕೆಗಳಿಗೆ ನೀಲಕಂಠೇಶ್ವರ ದೇವಾಲಯದ ಆವರಣವನ್ನೇ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿದ್ದರು. ಹೋರಾಟದ ರೂಪುರೇಷೆಗಳು ಇಲ್ಲಿಯೇ ಸಿದ್ಧಗೊಳ್ಳುತ್ತಿದ್ದವು. ಈ ಕಾರಣಕ್ಕೆ ಇಂದಿಗೂ ಜಿಲ್ಲಾಡಳಿತ, ರಾಜಕೀಯ ಪಕ್ಷಗಳ ಜಾಥಾ, ಪ್ರತಿಭಟನೆಗಳು ನೀಲಕಂಠೇಶ್ವರ ದೇವಾಲಯದಿಂದಲೇ ಆರಂಭಗೊಳ್ಳುತ್ತವೆ.

ನೀಲಕಂಠ ದೇವಾಲಯದ ನವಗ್ರಹ ಸನ್ನಿಧಿಯ ಪಕ್ಕದಲ್ಲೇ ಇರುವ ಎಂಟು ಅಡಿ ಎತ್ತರದ ಮಹಾತ್ಮಗಾಂಧಿ ಪ್ರತಿಮೆ ಭಕ್ತರ ಗಮನ ಸೆಳೆಯುತ್ತದೆ. ಊರುಗೋಲು ಹಿಡಿದು ಚಳವಳಿಗೆ ಹೊರಟಂತಿರುವ ಪ್ರತಿಮೆ ಶುದ್ಧ ಶ್ವೇತವರ್ಣದಿಂದ ಕೂಡಿದೆ. ಸಿಮೆಂಟ್ ಹಾಗೂ ಕಬ್ಬಿಣದಿಂದ ರೂಪಿಸಲಾಗಿರುವ ಈ ಪ್ರತಿಮೆಯನ್ನು ವೀರಶೈವ ಸಮಾಜದ ಆಡಳಿತ ಮಂಡಳಿ ಸುಸ್ಥಿತಿಯಲ್ಲಿಟ್ಟಿದೆ.

ನೀಲ ಕಂಠೇಶ್ವರ ದೇವಾಲಯದಲ್ಲೇ ಹೋರಾಟದ ಕಿಚ್ಚು ಹೊತ್ತಿಕೊಳ್ಳುತ್ತಿದ್ದ ಕಾರಣ ಗಾಂಧಿ ಪ್ರತಿಮೆಗೆ ದೇವಾಲಯದೊಳಗೆ ಸ್ಥಾನ ನೀಡಲಾಯಿತು. ಆಗಿನಿಂದ ಇಂದಿನವರೆಗೂ ಗಾಂಧೀಜಿ ಪ್ರತಿಮೆಗೂ ಆರಾಧನೆ ಮಾಡಿಕೊಂಡು ಬರಲಾಗುತ್ತಿದೆ. ಪ್ರತಿ ರಾಷ್ಟ್ರೀಯ ಹಬ್ಬಗಳ ದಿನದಂದು ಪ್ರತಿಮೆಗೆ ವಿಶೇಷ ಅಲಂಕಾರ ಮಾಡಿ ಮಾಲಾರ್ಪಣೆ ಮಾಡಲಾಗುತ್ತದೆ. ನೀಲಕಂಠೇಶ್ವರಸ್ವಾಮಿ ಸನ್ನಿಧಿಯಲ್ಲಿ ಬಸವಣ್ಣ, ಗಾಂಧಿ ಮುಂತಾದ ಮಾನವತಾವಾದಿಗಳಿಗೆ ಗೌರವ ನೀಡಲಾಗಿದೆ. ಈ ವರ್ಷ ಈ ತಾಣದಲ್ಲಿ ಜಿಲ್ಲಾಡಳಿತದ ವತಿಯಿಂದಲೇ ಬಸವೇಶ್ವರ ಜಯಂತಿ ನಡೆಯುತ್ತಿರುವುದು ವಿಶೇಷತೆ ಎನಿಸಿಕೊಂಡಿದೆ.

ಬಸವೇಶ್ವರ ಜಯಂತಿಗೆ ಪೂರ್ವಭಾವಿಯಾಗಿ ಭಾನುವಾರ ವೈಭವದ ಬೈಕ್ ರ್ಯಾಲಿ ನಡೆಯಿತು. ನೂರಾರು ಯುವಕರು ನೀಲಕಂಠೇಶ್ವರ ಸ್ವಾಮಿ ಸನ್ನಿಧಿಯಿಂದ ನಗರದ ವಿವಿಧೆಡೆ ಬೈಕ್ಗಳಲ್ಲಿ ಸಂಚಾರ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-44-586565762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.