ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನಾ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಅನುದಾನ ನೀಡಬೇಕು’ ಎಂದು ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಗುರುವಾರ 4ನೇ ದಿನಕ್ಕೆ ಅಡಿಯಿಟ್ಟಿತು. ಸ್ವಾಮೀಜಿಗಳು, ಸಂಘಟನೆಗಳ ಪದಾಧಿಕಾರಿಗಳು, ಮಹಿಳೆಯರು ಪಾಲ್ಗೊಂಡು ರೈತರಿಗೆ ಶಕ್ತಿ ತುಂಬಿದರು.

ಕೆ.ಸಿ.ರೊಪ್ಪ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತ ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ನಿಮಗೆ ನಾವು ಕೇಳ್ತಿರೋದು ಕುಡಿಯೋದಿಕ್ಕೆ ನೀರು. ಕೈಮುಗಿದು ಕೇಳ್ತಿವಿ ಭದ್ರಾ ಕಾಮಗಾರಿ ಪೂರ್ಣಗೊಳಿಸಲು ಹಣ ಕೊಡಿ. ಬೇಗ ಕೆಲಸ ಮುಗಿಸಿ’ ಎಂದು ಬೇಡಿಕೊಂಡರು.

‘ನಾವು ಎಂದಿಗೂ ಬೇಡಿದ ಜನರಲ್ಲ. ನಮ್ಮವು ಕೊಟ್ಟ ಕೈಗಳು. ನಾವು ಬೆಳೆ ಬೆಳೆಯದಿದ್ದರೆ ಯಾರು ಉಳಿಯೋದೇ ಇಲ್ಲ. ಈ ಸತ್ಯ ಗೊತ್ತಿದ್ದೂ ನಮಗೆ ನೀರು ಕೊಡಲು ಯಾಕಿಷ್ಟು ಸತಾಯಿಸುತ್ತಿದ್ದೀರಿ. ಚುನಾವಣೆ ವೇಳೆ ನಮ್ಮೂರಿಗೆ ಬಂದ್ರೆ ಗ್ರಾಮಕ್ಕೆ ಬಿಟ್ಟುಕೊಳ್ಳದ ಪರಿಸ್ಥಿತಿ ತಂದುಕೊಳ್ಳಬೇಡಿ’ ಎಂದು ಎಚ್ಚರಿಸಿದರು.

‘ಕುಡಿಯುವ ನೀರಿಗೂ ಪರಿತಪಿಸುವ ಕಾಲ ಎದುರಾಗಿದೆ. ಬೆಳೆ ನಷ್ಟದ ಕಾರಣಕ್ಕೆ ಕೃಷಿಕರು ಸಾಲಗಾರರಾಗಿದ್ದಾರೆ. ಇವೆಲ್ಲವೂ ಸರ್ಕಾರಕ್ಕೆ ಗೊತ್ತಿದೆ. ಆದರೂ ಜಾಣ ಕುರುಡು ಪ್ರದರ್ಶಿಸುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಬಜೆಟ್ನಲ್ಲಿ ದೊಡ್ಡಮೊತ್ತದ ಹಣ ತೆಗೆದಿರಿಸಬೇಕು’ ಎಂದು ಒಂಟಿಕಂಬ ಮಠದ ತಿಪ್ಪೇರುದ್ರ ಸ್ವಾಮೀಜಿ ಆಗ್ರಹಿಸಿದರು.

‘ನಾವು ನೀರು ಕೇಳಿದರೆ ಆಳುವ ವರ್ಗ ವಿಷ ಕೊಡುತ್ತಿದೆ. ಇಲ್ಲಿನ ರೈತರಿಗೆ ಹೆಣ್ಣು ಕೊಡದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದಲೇ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೇ ನಮ್ಮ ಮುಂದಿನ ಪೀಳಿಗೆಯ ಬದುಕು ದುಸ್ತರವಾಗಲಿದೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು’ ಎಂದು ಕರುನಾಡ ವಿಜಯಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಆಗ್ರಹಿಸಿದರು.

ಬಂಜಾರ ಗುರುಪೀಠದ ಸೇವಾಲಾಲ್ ಸ್ವಾಮೀಜಿ, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ನರೇನಹಳ್ಳಿ ಅರುಣ್ ಕುಮಾರ್, ಚಳ್ಳಕೆರೆ ಬಸವರಾಜ್, ಮಾದಿಗ ಮೀಸಲಾತಿ ಹೋರಾಟಗಾರ ಎಂ.ಆರ್.ಶಿವರಾಜ್, ಮುಖಂಡರಾದ ಪೆನ್ನಯ್ಯ, ರಮೇಶ್ ಕೋಟಿ, ಹುಲ್ಲೂರು ಕುಮಾರಸ್ವಾಮಿ, ಸಿ.ಕಣ್ಮೇಶ್, ಹಂಪಯ್ಯನಮಾಳಿಗೆ ಧನಂಜಯ್ಯ, ಶ್ರೀನಿವಾಸ ನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260306-44-612477202

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.