ಹೊಳಲ್ಕೆರೆ: ಏ.30ರ ಒಳಗೆ ಭದ್ರಾ ಜಲಾಶಯದಿಂದ ಚಿತ್ರದುರ್ಗ ಜಿಲ್ಲೆಗೆ ಪ್ರಾಯೋಗಿಕವಾಗಿ ನೀರು ಹರಿಸಬೇಕಿದ್ದು, ಅಷ್ಟರ ಒಳಗೆ ಚಾನಲ್ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ತಾಲ್ಲೂಕಿನ ರೈತ ಮುಖಂಡರೊಂದಿಗೆ ಅಜ್ಜಂಪುರ ಸಮೀಪದ ಅಬ್ಬಿನಹೊಳಲು, ಹೆಗಡೆ ಹಳ್ಳಿ, ಹೆಬ್ಬೂರು ಗ್ರಾಮಗಳ ಸಮೀಪ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಗುರುವಾರ ವೀಕ್ಷಿಸಿ ಮಾತನಾಡಿದರು.

ಹೆಚ್ಚುವರಿ ಪರಿಹಾರಕ್ಕಾಗಿ ರೈತರು ಪ್ರಕರಣ ದಾಖಲಿಸಿದ್ದರಿಂದ ಅಬ್ಬಿನಹೊಳಲು ಸಮೀಪದಲ್ಲಿ ನಡೆಯುತ್ತಿದ್ದ ಕಾಮಗಾರಿ ಸ್ಥಗಿತವಾಗಿತ್ತು. ಆರು ತಿಂಗಳ ಹಿಂದೆ ರೈತರ ಮನವೊಲಿಸುವ ಕಾರ್ಯ ಮಾಡಿದ್ದೆ. ಪ್ರಕರಣ ಶೀಘ್ರ ಇತ್ಯರ್ಥ ಮಾಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೆ. ಚಿಕ್ಕಮಗಳೂರು ಜಿಲ್ಲಾ ನ್ಯಾಯಾಧೀಶರು ರೈತರಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಲೋಕ ಅದಾಲತ್ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿದರು ಎಂದರು.

ಕಾಮಗಾರಿ ನಡೆಸಲು ಈಗ ಯಾವುದೇ ಕಾನೂನು ತೊಡಕುಗಳಿಲ್ಲ. ಕಾಮಗಾರಿ ಆರಂಭವಾಗಿದ್ದರೂ, ದೊಡ್ಡ ಬಂಡೆ ಇರುವುದರಿಂದ ವಿಳಂಬವಾಗುತ್ತಿದೆ. ಹೆಗಡೆಹಳ್ಳಿ ಹತ್ತಿರದ ಚಾನಲ್ನಲ್ಲಿ ಬಂಡೆ ಇರುವುದರಿಂದ ಅದನ್ನು ಸ್ಫೋಟಿಸಿ ತೆರವುಗೊಳಿಸಲು ಅಧಿಕಾರಿಗಳು ಹಗಲು–ರಾತ್ರಿ ಶ್ರಮಿಸುತ್ತಿದ್ದಾರೆ. ಇನ್ನು ಹದಿನೈದು ದಿನಗಳಲ್ಲಿ ಬಂಡೆ ತೆಗೆಯುವ ಕಾರ್ಯ ಮುಗಿಸಬೇಕು. ಈ ಸ್ಥಳದಲ್ಲಿ ಎಂಬತ್ತು ಅಡಿ ಹಾಸು ಬಂಡೆ ಇರುವುದನ್ನು ತೆಗೆಯಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಚಿತ್ರಹಳ್ಳಿ ಲವಕುಮಾರ್, ಗುಂಡೇರಿ ಮಂಜುನಾಥ್, ಪರಮೇಶ್ವರಪ್ಪ, ಚಂದ್ರಪ್ಪ, ಜಗದೀಶ್, ಚಂದ್ರಶೇಖರ್, ನಂದಕುಮಾರ್, ನಾಗರಾಜ್, ವಸಂತ ಕುಮಾರ್, ರಾಜಣ್ಣ, ಪ್ರಭಾಕರ್, ರೈತ ಸಂಘದ ಮುಖಂಡರಾದ ನಾಗರಾಜ್, ಶಿವಕುಮಾರ್, ಮಲ್ಲಿಕಾರ್ಜುನ್, ಕುರುಬ ಸಮಾಜದ ಅಧ್ಯಕ್ಷ ಹಳ್ಳಪ್ಪ ಹಾಗೂ ರೈತರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-44-84360537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.