ಚಿತ್ರದುರ್ಗ: ‘ಭಗತ್ ಸಿಂಗ್ ದೇಶದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಬ್ರಿಟಿಷರನ್ನು ಭಾರತದಿಂದ ಓಡಿಸಿದರೆ ಸಾಲದು, ಸಮಾಜವಾದಿ ಸಮಾಜ ನಮ್ಮದಾಗಬೇಕು ಎಂಬ ಆಶಯದಿಂದ ಹೋರಾಟ ನಡೆಸಿದರು’ ಎಂದು ಕಾರ್ಮಿಕ ಮುಖಂಡ ರವಿಕುಮಾರ್ ಹೇಳಿದರು.

ಎಐಡಿವೈಒ, ಎಐಡಿಎಸ್ಒ ಸಂಘಟನೆಗಳ ವತಿಯಿಂದ ಭಗತ್ ಸಿಂಗ್ ಉದ್ಯಾನದಲ್ಲಿ ನಡೆದ ಭಗತ್ ಸಿಂಗ್ ಸ್ಮರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಬ್ರಿಟಿಷರ ಜಾಗದಲ್ಲಿ ನಮ್ಮವರೇ ಕುಳಿತು ಅಧಿಕಾರ ನಡೆಸಬೇಕು. ರೈತ, ಕಾರ್ಮಿಕರ ಜನಸಾಮಾನ್ಯರ ಮೇಲೆ ದಬ್ಬಾಳಿಕೆ ನಡೆಸುವಂತಹ ಸ್ವಾತಂತ್ರ್ಯ ನಮಗೆ ಬೇಕಿಲ್ಲ. ಮಾನವನಿಂದ ಮಾನವನ ಶೋಷಣೆಗೆ ಅವಕಾಶವೇ ಇಲ್ಲದಂತಹ ಸಮಾಜವಾದಿ ಸಮಾಜ ನಮ್ಮದಾಗಬೇಕು ಎಂದು ಬಯಸಿದ್ದರು. ಅದಕ್ಕಾಗಿ ಅವಿರತವಾಗಿ ಹೋರಾಡಿ ಕೇವಲ ತಮ್ಮ 23ನೇ ವಯಸ್ಸಿನಲ್ಲೇ ತನ್ನ ಸಹೋದರರಾದ ಸುಖದೇವ್ ಮತ್ತು ರಾಜಗುರು ಅವರೊಂದಿಗೆ ಗಲ್ಲುಗಂಬವೇರಿ ಹುತಾತ್ಮರಾದರು’ ಎಂದರು.

‘ಭಗತ್ ಸಿಂಗ್ ನುಡಿದ ಮಾತು ಇಂದಿಗೂ ನಿಜವಾಗಿದೆ. ಇಂದು ನಮ್ಮ ದೇಶದ ಬಂಡವಾಳಶಾಹಿಗಳು ದುಡಿಯುವ ಜನರನ್ನು ಶೋಷಿಸುತ್ತಿದ್ದಾರೆ. ಸಮಾನತೆ ಕೇವಲ ಮಾತುಗಳಲ್ಲಿ ಮಾತ್ರ ಉಳಿದಿದೆ. ಆದ್ದರಿಂದ ನಾವು ಭಗತ್ ಸಿಂಗ್ ಅವರ ಆದರ್ಶವನ್ನು, ಚಿಂತನೆಗಳನ್ನು ಅರ್ಥೈಸಿಕೊಂಡು ನಮ್ಮ ಸಮಾಜದ ಆಮೂಲಾಗ್ರ ಬದಲಾವಣೆಗಾಗಿ ಹೋರಾಡಬೇಕು’ ಎಂದು ಹೇಳಿದರು.

ಲೇಖಕ ಎಚ್.ಆನಂದಕುಮಾರ್ ಮಾತನಾಡಿ ‘ಭಗತ್ ಸಿಂಗ್ ಕೇವಲ ಒಬ್ಬ ಹೋರಾಟಗಾರ ಆಗಿರಲಿಲ್ಲ, ಅವರೊಬ್ಬ ಚಿಂತಕರಾಗಿದ್ದರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಪಾರ ಜ್ಞಾನ ಸಂಪತ್ತನ್ನು ಗಳಿಸಿ ದೇಶದ ಸರ್ವಾಂಗೀಣ ಪ್ರಗತಿಗಾಗಿ ಅಮೂಲ್ಯವಾದ ಸಮಾಜವಾದಿ ಚಿಂತನೆಯನ್ನು ಅವರು ನೀಡಿದ್ದಾರೆ. ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವ ಹೊಣೆ ನಮ್ಮ ಮೇಲಿದೆ’ ಎಂದರು.

ಈ ಎಐಡಿಎಸ್ಒ ಮುಖಂಡ ಈರಣ್ಣ ಮಾತನಾಡಿ ‘ಭಗತ್ ಸಿಂಗ್ ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಅನ್ಯಾಯದ ವಿರುದ್ಧ ಧ್ವನಿ ಎತ್ತಲು ನಮಗೆ ಪ್ರೇರಣೆ ನೀಡುತ್ತವೆ. ಸರ್ಕಾರ ಹಳ್ಳಿಗಳ ಶಾಲೆಗಳಲ್ಲಿ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂಬ ಕಾರಣಕ್ಕೆ ಸಾವಿರಾರು ಶಾಲೆಗಳನ್ನು ಮುಚ್ಚುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ಸಣ್ಣ ಸಣ್ಣ ಶಾಲೆಗಳನ್ನು ದೊಡ್ಡ ಶಾಲೆಗಳೊಂದಿಗೆ ವಿಲೀನ ಮಾಡಲಾಗುತ್ತಿದೆ. ಬಡವರ ಬದುಕಿನ ಬೆಳಕಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡದೆ ನಾವು ಹೋರಾಟ ಮಾಡುತ್ತಿದ್ದೇವೆ.. ಇಂತಹ ಹೋರಾಟಕ್ಕೆ ಭಗತ್ ಸಿಂಗ್ ಸ್ಫೂರ್ತಿಯಾಗಿದ್ದಾರೆ’ ಎಂದ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-44-1987157306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.