ಚಿತ್ರದುರ್ಗ: ಹಳೇ ವೈಷಮ್ಯದ ಕಾರಣ, ತಾಲ್ಲೂಕಿನ ಭೀಮಸಮುದ್ರ ಕ್ಯಾಂಪ್ ಗ್ರಾಮದಲ್ಲಿ ಗುರುವಾರ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸುವದಲ್ಲಿ ಯಶಸ್ವಿಯಾಗಿದ್ದಾರೆ.

ಭೀಮಸಮುದ್ರ ಕ್ಯಾಂಪ್ ಗ್ರಾಮದ ಕಾಂತರಾಜ್ (35) ಕೊಲೆಯಾದ ವ್ಯಕ್ತಿ. ಆರೋಪಿ ನರಸಿಂಹಪ್ಪನನ್ನು (57) ಪೊಲೀಸರು ಬಂಧಿಸಿದ್ದಾರೆ. 2020ರಲ್ಲಿ ಕಾಂತರಾಜ್ ಹಾಗೂ ನರಸಿಂಹಪ್ಪ ನಡುವೆ ಗಲಾಟೆ ನಡೆದಿತ್ತು. ನರಸಿಂಹಪ್ಪನ ಮೇಲೆ ಕಾಂತರಾಜ್ ಹಲ್ಲೆ ನಡೆಸಿದ್ದ ಕಾರಣಕ್ಕೆ ದೂರು ದಾಖಲಿಸಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು.

₹20,000 ಹಣ ನೀಡಿ ರಾಜೀ ಮಾಡಿಕೊಳ್ಳುವಂತೆ ನರಸಿಂಹಪ್ಪ ಕೋರಿದ್ದರು. ಇದಕ್ಕೆ ಕಾಂತರಾಜ್ ಒಪ್ಪಿರಲಿಲ್ಲ. ಇದರಿಂದ ಕಾಂತರಾಜ್ ಜೊತೆಗೆ ಗಲಾಟೆ ತೆಗೆದು ಗುರುವಾರ ಅವರ ತಲೆಗೆ ಕಲ್ಲಿನಿಂದ ಜಜ್ಜಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾಂತರಾಜ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರು ಮೃತಪಟ್ಟರು.

ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.