ಚಿತ್ರದುರ್ಗ: ‘ಬಿಜೆಪಿ ಕೆಲವೇ ಪ್ರದೇಶಗಳಿಗೆ ಸೀಮಿತ ಎಂಬ ಆರೋಪಗಳಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ತನ್ನ ಅಮೋಘ ನಾಯಕತ್ವದ ಮೂಲಕ ಬಿಜೆಪಿ ಇಡೀ ಭಾರತಕ್ಕೆ ಸೇರಿದ ಪಕ್ಷ ಎಂದು ಸಾಬೀತು ಮಾಡಿ ತೋರಿಸಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.

ಮೋದಿಯವರು ಕಳುಹಿಸಿದ ಸಂದೇಶದ ಸಾರವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಓದಿದರು.

ಮೋದಿ ಸಂದೇಶ: ‘ಯಡಿಯೂರಪ್ಪ ಅವರು ಸದಾ ವಿನಮ್ರತೆ, ಸಹಾನುಭೂತಿ ಮತ್ತು ಕಠಿಣ ಪರಿಶ್ರಮದ ವ್ಯಕ್ತಿ. ಅವರ ಸಾಮಾಜಿಕ ಸೇವೆಯ 50 ವರ್ಷಗಳ ಪಯಣವು ಬದ್ಧತೆ, ಸಂಘರ್ಷ, ತ್ಯಾಗ ಮತ್ತು ಜನರಿಗಾಗಿ ಸಮರ್ಪಣೆಯ ಕಥೆ.

‘ಯಡಿಯೂರಪ್ಪ ಅವರನ್ನು ಸಂಘರ್ಷ ಮತ್ತು ಯಶಸ್ಸಿನ ಎರಡೂ ಸಂದರ್ಭದಲ್ಲಿ ನೋಡಿದ್ದೇನೆ. ಪ್ರತಿ ಸಂದರ್ಭದಲ್ಲಿಯೂ ಅವರು ಕರ್ನಾಟಕದ ಜನರಿಗೆ ಮತ್ತು ಪಕ್ಷದ ಸಿದ್ಧಾಂತಕ್ಕೆ ಅಚಲ ಬದ್ಧತೆಯನ್ನು ಹೊಂದಿದ್ದರು. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ ಪ್ರವರ್ತಕರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-62440445

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.