ನಾಯಕನಹಟ್ಟಿ: ಕೃಷಿ ಹೊಂಡದಲ್ಲಿ ಈಜಾಡಲು ಹೋಗಿದ್ದ ತಳಕು ಹೋಬಳಿಯ ಚನ್ನಗಾನಹಳ್ಳಿ ಗ್ರಾಮದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಕೀರ್ತನ್ (12) ಮೃತಪಟ್ಟ ಬಾಲಕ. ತಿಪ್ಪೇಸ್ವಾಮಿ ಮತ್ತು ಅಂಬಿಕಾ ದಂಪತಿ ಪುತ್ರ ಕೀರ್ತನ್ ಚನ್ನಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ಸೋಮವಾರ ಮಹಾವೀರ ಜಯಂತಿ ಪ್ರಯುಕ್ತ ಶಾಲೆಗೆ ರಜೆ ಇದ್ದಿದ್ದರಿಂದ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಅಣ್ಣ ವಂದನ್ ಜೊತೆ ಆಟವಾಡುವುದಾಗಿ ತಾಯಿಗೆ ಹೇಳಿ ಹೊರಗೆ ತೆರಳಿದ್ದ.

ನಂತರ ಚನ್ನಗಾನಹಳ್ಳಿ- ಘಟಪರ್ತಿ ಗ್ರಾಮಗಳ ನಡುವಿನ ದೊಡ್ಡಬಳ್ಳಾಪುರ ಗುರುಪ್ರಕಾಶ್ ಅವರ ಜಮೀನಿನಲ್ಲಿ ಇರುವ ಕೃಷಿಹೊಂಡದಲ್ಲಿ ತನ್ನ ಗೆಳೆಯರಾದ ನವೀನ್ ಮತ್ತು ಮಧು ಅವರೊಂದಿಗೆ ಈಜಾಡಲು ತೆರಳಿ ನೀರಿಗೆ ಇಳಿದಿದ್ದಾರೆ. ಈಜುಬಾರದ ಕೀರ್ತನ್ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣವೇ ಬಾಲಕರು ಅಲ್ಲಿಯೇ ಇದ್ದ ಸಾರ್ವಜನಿಕರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳೀಯರು ಬಂದು ಕೃಷಿ ಹೊಂಡದಲ್ಲಿ ಹುಡುಕುವಷ್ಟರಲ್ಲಿ ಕೀರ್ತನ್ ಮೃತಪಟ್ಟಿದ್ದ. ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-44-70408841

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.