ಚಿತ್ರದುರ್ಗ: ‘ಸಂತೋಷ್ ಲಾಡ್ ಫೌಂಡೇಷನ್ ವತಿಯಿಂದ ಮೇ 31ರಂದು ನಗರದ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ‘ಬುದ್ಧ, ಬಸವ ಮತ್ತು ಅಂಬೇಡ್ಕರ್ ಸಿದ್ಧಾಂತ’ಗಳ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದೆ’ ಎಂದು ಫೌಂಡೇಷನ್ ಸಂಚಾಲಕಿ ಕವಿತಾ ರೆಡ್ಡಿ ಹೇಳಿದರು.

‘ಅಸಮಾನತೆಯು ಜನರ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಅಸಮಾನತೆ ವಿರುದ್ಧ ಹೋರಾಡಿದ ಮಹಾಪುರುಷರು ಮತ್ತು ಮಹಾಮಹಿಳೆಯರು ಜಾತಿ, ಮತ, ಅಂತಸ್ತು, ಲಿಂಗ ಮತ್ತು ಇತರ ತಾರತಮ್ಯಗಳ ವಿರುದ್ಧ ಜಾಗೃತಿ ಮೂಡಿಸಿದರು. ಅವರು ವಿಚಾರಗಳ ಬಗ್ಗೆ ಚಿಂತನ ಮಂಥನ ಮಾಡುವ ಉದ್ದೇಶದಿಂದ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿ ‘ಇಂದಿನ ಯುವ ಪೀಳಿಗೆಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಕುರಿತುತಿಳಿವಳಿಕೆ, ಅಧ್ಯಯನ ಅಗತ್ಯವಾಗಿದೆ. ಅವರು ತಮ್ಮ ಸಮುದಾಯಕ್ಕೆ ಮಾತ್ರವೇ ಸಂದೇಶವನ್ನು ನೀಡಲಿಲ್ಲ. ಬದಲಾಗಿ ಎಲ್ಲ ಸಮುದಾಯಗಳಿಗೂ ಮಾರ್ಗದರ್ಶನ ಮಾಡಿದರು. ಈ ಮಹಾಮಾನವತಾವಾದಿಗಳು ಸಾರ್ವತ್ರಿಕವಾಗಿದ್ದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ’ ಎಂದರು.

ಫೌಂಡೇಷನ್ ಸ್ವಯಂ ಸೇವಕ ಸಂದೀಪ್ ಮಾತನಾಡಿ ‘ವಿಚಾರ ಸಂಕಿರಣದಲ್ಲಿ ನಾಡಿನ ವಿವಿಧ ವಿದ್ವಾಂಸರು, ಸಾಹಿತಿಗಳು ಚಿಂತಕರು ಉಪನ್ಯಾಸ ನೀಡಲಿದ್ದಾರೆ. ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಬುದ್ಧನ ಅಷ್ಟಾಂಗ ಮಾರ್ಗ ಕುರಿತಂತೆ ಸಂಜೀವ ಕುಲಕರ್ಣಿ, ಬುದ್ಧನ ಧಮ್ಮ ಮತ್ತು ಮಹಿಳೆಯ ಬಗ್ಗೆ ಅನುಸೂಯಾ ಕಾಂಬಳೆ, ಬಸವಣ್ಣನವರ ಅನನ್ಯ ಸಾಧನೆಗಳ ಬಗ್ಗೆ ರಂಜಾನ್ ದರ್ಗಾ, ಸಮಾನತೆ ಮತ್ತು ಅಂತರ್ಜಾತಿ ವಿವಾಹದ ಬಗ್ಗೆ ವಿನಯ ವಕ್ಕುಂದ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪಯಣ ಸಂಕಲ್ಪದಿಂದ ಸಂವಿಧಾನದವರೆಗೆ ಬಗ್ಗೆ ಅಪ್ಪಗೆರೆ ಸೋಮಶೇಖರ್, ಅಂಬೇಡ್ಕರ್ ಅವರ ವಿಚಾರಧಾರೆಗಳು 21ನೇ ಶತಮಾನದ ಭಾರತದಲ್ಲಿ ಪ್ರಸ್ತುತತೆ ಬಗ್ಗೆ ಜೆ.ಸೋಮಶೇಖರ್ ಮಾತನಾಡಲಿದ್ದಾರೆ’ ಎಂದರು.

ಶಿವಾನಂದ ಸ್ವಾಮೀಜಿ, ಬಸವಮಹಾಂತ ಶ್ರೀ, ಶಾಂತವೀರ ಸ್ವಾಮೀಜಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-44-106880571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.