ಚಿಕ್ಕಜಾಜೂರು: ಕಲ್ಲವ್ವನಾಗತಿಹಳ್ಳಿ ಗ್ರಾಮದ ವೃದ್ಧರೊಬ್ಬರು ಗ್ರಾಮ ಸಮೀಪದ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಿಸಿಲಿನ ತಾಪಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ದೂರಿದ್ದಾರೆ.

ಗ್ರಾಮದ ಕೆ.ತಿಪ್ಪೇರುದ್ರಪ್ಪ (80) ಮೃತ ವೃದ್ಧ. ವಯೋಸಹಜವಾಗಿ ಮರೆವಿನ ಕಾಯಿಲೆ ಇದ್ದ ಕಾರಣ ಅವರು ಆಗಾಗ ಮನೆ ಬಿಟ್ಟು ಹೋಗುತ್ತಿದ್ದರು. ಕುಟುಂಬ ಸದಸ್ಯರು ಹುಡುಕಿ ಮನೆಗೆ ಕರೆದುಕೊಂಡು ಬರುತ್ತಿದ್ದರು.

‘ಮೇ 3ರಂದು ತಿಪ್ಪೇರುದ್ರಪ್ಪ ಮನೆ ಬಿಟ್ಟು ಹೋಗಿದ್ದರು. ಕುಟುಂಬದವರು ಹುಡುಕಾಟ ನಡೆಸಿದಾಗ ಬಿ. ದುರ್ಗ ಗ್ರಾಮದ ಜಮೀನೊಂದರಲ್ಲಿ ಮೃತಪಟ್ಟಿರುವ ವಿಷಯ ಬುಧವಾರ ಗೊತ್ತಾಗಿದೆ. ಬೆಳಕಿಗೆ ಬಂದಿದೆ. ನಮ್ಮ ತಂದೆ 2 ದಿನಗಳಿಂದ ಊಟವಿಲ್ಲದೇ ಬಳಲಿದ್ದಾರೆ. ಬಿಸಿಲಿನಿಂದ ಸುಸ್ತಾಗಿ ಬಿದ್ದು ಮೃತಪಟ್ಟಿದ್ದಾರೆ’ ಎಂದು ಪುತ್ರ ಕೆ.ಟಿ. ಪ್ರಕಾಶ್ ಚಿಕ್ಕಜಾಜೂರು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಬಿಸಿಲಿನ ವಾತಾವರಣದಲ್ಲಿ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ’ ಎಂದು ಚಿಕ್ಕಜಾಜೂರು ಠಾಣೆ ಸಬ್ ಇನ್ಸ್ಪೆಕ್ಟರ್ ಗಾದಿಲಿಂಗಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-44-857074357

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.