ಹೊಸದುರ್ಗ: ‘ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ತನ್ನ ಚಿಕ್ಕಪ್ಪ ಜಯಣ್ಣ ಅವರ ಆಶ್ರಯದಲ್ಲಿ ಬೆಳೆದ ಡಿ. ಸುಧಾಕರ್ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ಮುತ್ಸದ್ಧಿ ರಾಜಕಾರಣಿ’ ಎಂದು ಮಾಜಿ ಶಾಸಕ ಇಲ್ಕಲ್ ವಿಜಯ್ಕುಮಾರ್ ಅವರು ಸಚಿವ ಡಿ.ಸುಧಾಕರ್ ಅವರನ್ನು ನೆನೆದು ಭಾವುಕರಾದರು.

ತಾಲ್ಲೂಕು ಜೈನ ಸಮುದಾಯದ ವತಿಯಿಂದ ಪಟ್ಟಣದ ಜಿನ ಮಂದಿರದಲ್ಲಿ ಮಂಗಳವಾರ ಸಚಿವ ಡಿ. ಸುಧಾಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಜಾತಿಭೇದ ತೊರೆದು, ಎಲ್ಲರೊಳಗೆ ಒಂದಾಗಿ ಬಾಳಿದ್ದರು. ಪ್ರತಿಯೊಬ್ಬರೂ ಗೌರವ ಕೊಡುವಂತಹ ಹಸನ್ಮುಖಿ. ಬರಗಾಲದ ಸಮಯದಲ್ಲಿ ಜಿಲ್ಲೆಯ ಎಲ್ಲಾ ಗೋಶಾಲೆಗಳಿಗೆ ಮೇವು ಒದಗಿಸಿದ್ದರು. ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.

ಸಚಿವ ಸುಧಾಕರ್ ಕೊಡುಗೈ ದಾನಿಯಾಗಿದ್ದಾರೆ. ಮನೆ ಬಾಗಿಲಿಗೆ ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಯಾವುದೇ ಶುಭ ಸಮಾರಂಭ ಅಥವಾ ಧಾರ್ಮಿಕ ಕಾರ್ಯಕ್ರಮಗಳಿದ್ದರೇ ಅದರಲ್ಲಿ ಸುಧಾಕರ್ ಅವರ ಸಹಾಯವೂ ಇರುತ್ತಿತ್ತು ಎಂದು ಜೈನ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಆದಿರಾಜಯ್ಯ ತಿಳಿಸಿದರು.

ಜೈನ ಸಮುದಾಯದ ಉಪಾಧ್ಯಕ್ಷ ಬ್ರಹ್ಮಪಾಲ್, ಜಾನಕಲ್ ಜೈನ ಬಸದಿ ಅಧ್ಯಕ್ಷ ಧರಣೇಂದ್ರ, ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಮ್ಮ, ಮುಖಂಡರಾದ ಸುಮತಿ ಕುಮಾರ್, ಇ.ವಿ. ಅಜ್ಜಪ್ಪ, ಬಿ. ನವೀನ್ ಕುಮಾರ್ ಸೇರಿದಂತೆ ಶ್ರಾವಕ ಹಾಗೂ ಶ್ರಾವಕಿಯರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-44-1025924363

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.