ಚಿತ್ರದುರ್ಗ: ‘ವೃತ್ತಿ ಜೀವನದಲ್ಲಿ ಬಡ್ತಿ ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ಆಗುವ ಸಣ್ಣ ನಿರ್ಲಕ್ಷ್ಯ, ಒತ್ತಡ, ಲೋಪದಿಂದ ಅರ್ಹರು ಇದರಿಂದ ವಂಚಿತರಾಗುತ್ತಾರೆ’ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಗಗನ್ ದೀಪ್ ತಿಳಿಸಿದರು.

ನಗರದ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಭಾನುವಾರ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ 1996ನೇ ಬ್ಯಾಚ್ ಪೊಲೀಸ್ ಅಧಿಕಾರಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿದರು.

‘ಇಲಾಖೆಯಲ್ಲಿ ಕಾನ್ಸ್ಟೆಬಲ್ಗಳಿಂದ ಹಿಡಿದು ಉನ್ನತ ಅಧಿಕಾರಿಯವರೆಗೂ ಬಡ್ತಿ ಮುಖ್ಯ. ನಿವೃತ್ತಿಯಾದ ಮೇಲೆ ಬಡ್ತಿಯ ಮಹತ್ವ ತಿಳಿಯುತ್ತದೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ’ ಎಂದರು.

‘ಇಲಾಖೆಯಲ್ಲಿ ಕಡತಗಳ ನಿರ್ವಹಣೆಯಲ್ಲಿ ಆಗುವ ಲೋಪದಿಂದ ಸಿಬ್ಬಂದಿ ಬಡ್ತಿ ವಿಚಾರದಲ್ಲಿ ಅನ್ಯಾಯಕ್ಕೊಳಗಾಗುತ್ತಾರೆ. ನಾಲ್ಕೈದು ಬಾರಿ ಪರಿಶೀಲಿಸಿದರೆ ಸಮಸ್ಯೆ ಆಗವುದಿಲ್ಲ. ಎಲ್ಲರೂ ನಮ್ಮಂತೆ ಎನ್ನುವ ಭಾವನೆ ಮೂಡಿದರೆ ಸಮಸ್ಯೆ ಆಗುವುದಿಲ್ಲ’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಎನ್ನುವುದು ಕಠಿಣವಾಗುತ್ತಿದೆ. ಅದೃಷ್ಟವಶಾತ್ ನಾನು ಕೆಲಸ ಮಾಡಿದ ಎಲ್ಲ ಸ್ಥಳಗಳಲ್ಲಿ ಸಿಬ್ಬಂದಿ ಹಾಗೂ ಮೇಲಧಿಕಾರಿಗಳ ಸಹಕಾರ ಉತ್ತಮವಾಗಿತ್ತು. ಎಂತಹ ಸಮಸ್ಯೆ ಎದುರಾದರೂ ಧೈರ್ಯವಾಗಿ ನಿಭಾಯಿಸಿದ್ದೇನೆ. 1996ನೇ ಬ್ಯಾಚ್ನವರು ನನ್ನನ್ನು ಆಹ್ವಾನಿಸಿ ಗೌರವಿಸಿದಂತ ಸನ್ನಿವೇಶವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಭಾವುಕರಾದರು.

‘1990ರಲ್ಲಿ ಪುತ್ತೂರಿನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಮಯದಲ್ಲಿ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ನನಗೆ ಕಾನ್ಸ್ಟೆಬಲ್ಗಳ ನೇಮಕದ ಹೊಣೆ ನೀಡಿದರು. ಆಗ ನನಗೆ ಭಯವಾಯಿತು. ಆದರೆ, ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ಅದೇ ರೀತಿ ಬೆಳಗಾವಿ, ಬಳ್ಳಾರಿ ಹಾಗೂ ಚಿತ್ರದುರ್ಗದಲ್ಲೀ ನೇಮಕ ಮಾಡಿದ ನೆಮ್ಮದಿ ನನಗೆ ಇದೆ’ ಎಂದರು.

‘ಪ್ರಾಮಾಣಿಕತೆ ಬಾಯಲ್ಲಿದ್ದರೆ ಸಾಲದು, ಅದನ್ನು ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂಬುದಕ್ಕೆ ಗಗನ್ದೀಪ್ ಸ್ಪಷ್ಟ ನಿದರ್ಶನ. ಹುಬ್ಬಳ್ಳಿ–ಧಾರವಾಡದಲ್ಲಿ ಅಕ್ರಮ ಮದ್ಯ ದಂಧೆಯನ್ನು ಮಟ್ಟ ಹಾಕಿದ ಯಶಸ್ಸು ಅವರಿಗೆ ಸಲ್ಲುತ್ತದೆ. ಅವರ ಪತ್ನಿ ಎಂದಿಗೂ ತಮ್ಮ ಪತಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಒಬ್ಬ ಪೊಲೀಸ್ ಅಧಿಕಾರಿಗೆ ಬದ್ಧತೆ ಇರಬೇಕು ಎನ್ನುವುದನ್ನು ತಮ್ಮ ನಡವಳಿಕೆಯಲ್ಲಿ ತೋರಿಸಿಕೊಟ್ಟಿದ್ದಾರೆ’ ಎಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ತಿಳಿಸಿದರು.

‘ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಅವರು ಯಾವುದೇ ರಾಜಕೀಯ ಒತ್ತಡ, ಆಸೆ ಆಮಿಷಗಳಿಗೆ ಒಳಗಾಗದೆ ಪಾರದರ್ಶಕವಾಗಿ 250 ಪೊಲೀಸ್ ಪೇದೆಗಳನ್ನು ನೇಮಕ ಮಾಡಿದರು. ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿದ್ದರು. ವೃತ್ತಿ ಜೀವನದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳು ಇಂದಿಗೂ ಕೆಲ ಜಿಲ್ಲೆಗಳಲ್ಲಿ ಪಾಲನೆ ಆಗುತ್ತಿವೆ’ ಎಂದರು.

‘ಅಧಿಕಾರದಲ್ಲಿದ್ದಾಗ ಎಲ್ಲರೂ ಗೌರವಿಸುವುದು ಸಹಜ. ಆದರೆ, ನಿವೃತ್ತಿಯಾದ ನಂತರ ಗೌರವ ಸಿಗುವುದು ತುಂಬಾ ಕಡಿಮೆ. ಅವರ ಕಾಲದಲ್ಲಿ ನಡೆದ ಕಾನ್ಸ್ಟೆಬಲ್ಗಳ ನೇಮಕ ಪ್ರಕ್ರಿಯೆಯ ಪಾರದರ್ಶಕತೆಗೆ ಈ ಅಭಿಮಾನದ ಕಾರ್ಯಕ್ರಮವೇ ಸಾಕ್ಷಿ. ಒತ್ತಡದ ನಡುವೆ ಕೆಲಸ ಮಾಡುವ ಪೊಲೀಸರಿಗೆ ಇಂತಹ ಕೂಟ ಅತ್ಯವಶ್ಯಕ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.

‘ಕೆ.ವಿ.ಗಗನ್ ದೀಪ್ ಅವರು ಅಧಿಕಾರದಲ್ಲಿದ್ದಾಗ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ನಿವೃತ್ತಿಯ ನಂತರವೂ ಕ್ರಿಯಾಶೀಲರಾಗಿದ್ದಾರೆ’ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ. ಶೇಖರ್ ಹೇಳಿದರು.

ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಗಗನ್ ದೀಪ್, ಪತ್ನಿ ಎ.ಎಸ್. ವಿಜಯಲಕ್ಷ್ಮಿ ಗಗನ್ದೀಪ್ ಅವರನ್ನು ಸನ್ಮಾನಿಸಲಾಯಿತು. ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಚ್.ಪರಮೇಶ್ವರ, ಆರ್.ಶಿವಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-44-1287639635

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.