ಚಿತ್ರದುರ್ಗ: ತಾಲ್ಲೂಕಿನ ಶ್ರೀಕ್ಷೇತ್ರ ಹಿರೇಗುಂಟನೂರು ಗ್ರಾಮದ ದ್ಯಾಮಲಾಂಬಾ ಅಮ್ಮನವರ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಏ.9ರಂದು ಮುಸ್ಸಂಜೆಯ ಶುಭಲಗ್ನದಲ್ಲಿ ನಡೆಯುವ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದಲೂ ಅಪಾರ ಸಂಖ್ಯೆಯ ಭಕ್ತರು ಶ್ರೀಕ್ಷೇತ್ರದತ್ತ ಭೇಟಿ ನೀಡುತ್ತಿದ್ದಾರೆ.

ದ್ಯಾಮಲಾಂಬಾ ಅಮ್ಮನವರ ಜಾತ್ರೋತ್ಸವ ಈಗಾಗಲೇ ಆರಂಭವಾಗಿದ್ದು, ಗ್ರಾಮದ ಪ್ರತಿ ಮನೆಗಳಲ್ಲಿ, ಬೀದಿಗಳಲ್ಲಿ ಸಡಗರ, ಸಂಭ್ರಮ ಹಬ್ಬದ ವಾತಾವರಣ ನೆಲೆಸಿದೆ. ಹೆಣ್ಣುಮಕ್ಕಳು ತವರು ಮನೆಗಳಿಗೆ ತಮ್ಮ ಸಂಬಂಧಿಕರೊಂದಿಗೆ ಬಂದಿದ್ದು ಎಲ್ಲರ ಮನದಲ್ಲೂ ದ್ಯಾಮಲಾಂಬಾ ದೇವಿಯ ಭಕ್ತಿಯ ಭಾವನೆ ಮೂಡಿದೆ. ಏ.5ರಂದು ಕಲ್ಯಾಣೋತ್ಸವದಿಂದ ಜಾತ್ರೆ ಆರಂಭವಾಗಿದ್ದು ಪ್ರತಿ ದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಅರೆಮಲೆನಾಡು ವಾತಾವಣರದ ಹಿರೇಗುಂಟನೂರು ಗ್ರಾಮದಲ್ಲಿ ನೆಲೆ ನಿಂತಿರುವ ದ್ಯಾಮಲಾಂಬಾ ಅಮ್ಮನವರು ಮನದ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ. ಜಾತ್ರೆಗೆ ಇಡೀ ಗ್ರಾಮ ಸಜ್ಜುಗೊಂಡಿದ್ದು ಎಲ್ಲೆಲ್ಲೂ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ. ಜಾತ್ರೆಯ ಅಂಗವಾಗಿ ಹಿರೇಗುಂಟನೂರು ಗ್ರಾಮದತ್ತ ಬರುತ್ತಿರುವ ಅಪಾರ ಸಂಖ್ಯೆಯ ಭಕ್ತರಿಗಾಗಿ ಪ್ರತಿದಿನವೂ ಅನ್ನಸಂತರ್ಪಣೆ ನಡೆಯುತ್ತಿದೆ. ದೇವಾಲಯದ ಆವರಣದಲ್ಲಿರುವ ದಾಸೋಹ ಭವನದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ದ್ಯಾಮಲಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ಪದಾಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ. ಹೊರಜಿಲ್ಲೆ, ಹೊರರಾಜ್ಯಗಳಿಂದ ಬಂದ ಭಕ್ತರ ವಾಸ್ತವ್ಯಕ್ಕಾಗಿ ದೇವಾಲಯದ ಪಕ್ಕದಲ್ಲೇ ಇರುವ ಯಾತ್ರಿ ನಿವಾಸವನ್ನು ಸಿದ್ಧಗೊಳಿಸಲಾಗಿದೆ. ಭಕ್ತರ ವಾಸ್ತವ್ಯಕ್ಕೆ ಸ್ವಚ್ಛತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ.

ರಥೋತ್ಸವದ ನಿಮಿತ್ತ ಕಳೆದ ಭಾನುವಾರದಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಲ್ಯಾಣೋತ್ಸವ, ನವಿಲು ಉತ್ಸವ, ಅಶ್ವೋತ್ಸವ, ಮೀಸಲು ಪೂಜೆ ಮತ್ತು ಗಜೋತ್ಸವಗಳು ರಥೋತ್ಸವದ ಪ್ರಯುಕ್ತ ನಡೆಯಲಿವೆ. ಏ.10ರಂದು ಸಂಜೆ ದೇವತೆಯ ಸಿಡಿ ಪೂಜೆ ನಡೆಯಲಿದ್ದು ಅಂದೇ ಸಂಜೆ ದೇವಿಯ ಹೂವಿನ ಪಲ್ಲಕ್ಕಿ ಉತ್ಸವವನ್ನೂ ಏರ್ಪಡಿಸಲಾಗಿದೆ.

ದೇಗುಲ ಜೀರ್ಣೋದ್ಧಾರಕ್ಕೆ ಸಿದ್ಧತೆ: ದ್ಯಾಮಲಾಂಬಾ ಅಮ್ಮನವರ ಐತಿಹಾಸಿಕ ದೇಗುಲ ಜೀರ್ಣೋದ್ಧಾರಕ್ಕೆ ಟ್ರಸ್ಟ್ ನಿರ್ಧರಿಸಿರುವುದು ಈ ಬಾರಿ ಜಾತ್ರೋತ್ಸವದಲ್ಲಿ ಮಹತ್ವ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಭಕ್ತಗಣ ಹೆಚ್ಚುತ್ತಲೇ ಇರುವ ಕಾರಣ ಈಗಿರುವ ದೇವಾಲಯ ಚಿಕ್ಕದಾಗಿದ್ದು, ಧಾರ್ಮಿಕ ಚಟುವಟಿಕೆಗಳಿಗೆ ಅಡಚಣೆಯುಂಟಾಗುತ್ತಿದೆ. ಭಕ್ತರ ಅಪೇಕ್ಷೆಯಂತೆ ಜೀರ್ಣೋದ್ಧಾರಕ್ಕೆ ನಿರ್ಣಯಿಸಿದೆ.

ದೇವಾಲಯವು ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ದೇವಾಲಯ ಜೀರ್ಣೋದ್ಧಾರಕ್ಕೆ ಇಲಾಖೆಯ ಆಯುಕ್ತರ ಅನುಮತಿ ಬೇಕಿದೆ. ಈಗಾಗಲೇ ಜಿಲ್ಲಾಧಿಕಾರಿ, ಇಲಾಖೆಯ ಅಧಿಕಾರಿಗಳ ಜೊತೆ ಹಲವು ಸುತ್ತಿನ ಸಭೆಗಳು ನಡೆದಿದ್ದು, ಅನುಮತಿ ಪಡೆಯುವ ಪ್ರಯತ್ನ ಪ್ರಗತಿಯಲ್ಲಿವೆ. ಅನುಮತಿ ಸಿಕ್ಕ ಕೂಡಲೇ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ನೀಲನಕ್ಷೆ ಸಿದ್ಧಗೊಂಡಿದ್ದು, ಭಕ್ತರ ಸಹಾಯದಿಂದಲೇ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಂದರವಾದ ರಾಜಗೋಪುರ, ಅಮ್ಮನವರ ಸನ್ನಿಧಿಯ ಸುತ್ತಲೂ ಪೌಳಿ ನಿರ್ಮಾಣದ ಯೋಜನೆ ಸಿದ್ಧವಾಗಿದೆ. ಹಿರಿಯರು ಕಟ್ಟಿರುವ ಐತಿಹಾಸಿಕ ದೇಗುಲದ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಗರ್ಭಗುಡಿ ಇರುವಲ್ಲಿಯೇ ಹೊಸ ರೂಪ ಕೊಡಲು ನಿರ್ಣಯಿಸಲಾಗಿದೆ.

ದ್ಯಾಮಲಾಂಬಾ ದೇವಸ್ಥಾನ ಅಭಿವೃದ್ಧಿ ಸಮಿತಿ ಟ್ರಸ್ಟ್ ವತಿಯಿಂದ ದೇವಾಲಯದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ. ಟ್ರಸ್ಟ್ನ ಈಗಿನ ಅಧ್ಯಕ್ಷರು, ಲೆಕ್ಕ ಪರಿಶೋಧಕರು, ಪ್ರಗತಿಪರ ರೈತರೂ ಆದ ಈ.ಚಂದ್ರಣ್ಣ ಅವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಅಮ್ಮನವರ ಸನ್ನಿದಿಯಲ್ಲಿ ದಾಸೋಹ ಭವನವನ್ನು ನಿರ್ಮಾಣ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-44-1396781898

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.