ಚಿತ್ರದುರ್ಗ: ಕೋಟೆನಾಡಿನ ಅಧಿದೇವತೆ ಏಕನಾಥೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಮೇಲುದುರ್ಗದಿಂದ ನಗರಕ್ಕೆ ದೇವಿ ವೈಭವದಿಂದ ಆಗಮಿಸಿತು.

ಸಂಪ್ರದಾಯದಂತೆ ನಡೆದ ದೊಡ್ಡ ಭಂಡಾರದ ಪೂಜೆ ಭಕ್ತರನ್ನು ಆಕರ್ಷಿಸಿತು. ಅಶ್ವವಾಹನರೂಢಳಾದ ದೇವಿಯ ಮೂರ್ತಿಯನ್ನು ಜಾತ್ರಾ ಪದ್ಧತಿಯಂತೆ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ದೇಗುಲದ ಮುಂಭಾಗವಿರುವ ಮಹಾರುದ್ರನ ವಿಗ್ರಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕುವ ವೇಳೆ ಉಧೋ ಉಧೋ ಎಂಬ ಹರ್ಷೋದ್ಗಾರ ಮೊಳಗಿತು.

ಮಲ್ಲಿಗೆ, ವಿವಿಧ ವರ್ಣದ ಸೇವಂತಿ, ಸುಗಂಧರಾಜ, ದುಂಡು ಮೊಗ್ಗು ಸೇರಿ ಹಲವು ಬಗೆಯ ಪುಷ್ಪ, ಬೃಹತ್ ಹೂವಿನ ಹಾರಗಳಿಂದ ಮೂರ್ತಿಯನ್ನು ಅಲಂಕರಿಸಿ, ಕೋಟೆಯಿಂದ ಭಕ್ತರು ಕರೆತಂದು ಟ್ರ್ಯಾಕ್ಟರ್ನಲ್ಲಿ ಪ್ರತಿಷ್ಠಾಪಿಸಿದ ನಂತರ ಉತ್ಸವ ಇನ್ನಷ್ಟು ಕಳೆಗಟ್ಟಿತು. ಕಹಳೆ, ನಗಾರಿ, ಉರುಮೆ, ಡೊಳ್ಳು, ತಮಟೆ ಸೇರಿ ಜನಪದ ಕಲಾತಂಡಗಳು ಮೆರುಗು ನೀಡಿದವು.

ಕಹಳೆ, ಉರುಮೆ, ತಮಟೆ, ಡೊಳ್ಳು, ನಗಾರಿ ಸೇರಿ ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ದಾರಿಯುದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು. ಕೋಟೆ ಆವರಣದಿಂದ ಕೋಟೆ ರಸ್ತೆಯ ಮೂಲಕ ಕಾಮನಬಾವಿ ಬಡಾವಣೆ ಪ್ರವೇಶಿಸಿದ ದೇವಿ ಮಾರಮ್ಮನ ದೇವಸ್ಥಾನಕ್ಕೆ ತೆರಳಿತು. ಬಳಿಕ ಭಕ್ತರಾದ ತಿಮ್ಮರಾಯಪ್ಪ ಕುಟುಂಬದ ನಿವಾಸಕ್ಕೆ ಮನೆಗೆ ಆಗಮಿಸಿ ಪೂಜೆ ಸ್ವೀಕರಿಸಿತು. ಸಂಪ್ರದಾಯದಂತೆ ಕುಟುಂಬಸ್ಥರು ದೇವಿಗೆ ಸೀರೆ, ಮಡಿಲಕ್ಕಿ, ಹೂವಿನ ಹಾರ ಅರ್ಪಿಸಿದರು.

ಭಕ್ತರ ಮನೆಗಳೇ ತವರು ಮನೆ ಎಂಬ ನಂಬಿಕೆ ಇರುವ ಕಾರಣ ಕೆಳಗಿನ ದುರ್ಗಕ್ಕೆ ದೇವಿಯನ್ನು ಕರೆತರಲು ಬೆಳಿಗ್ಗೆ 5ರಿಂದಲೇ ಸಾವಿರಾರು ಮಂದಿ ಕೋಟೆಯಲ್ಲಿ ಜಮಾಯಿಸಿದ್ದರು. ಪೂಜಾ ವಿಧಿವಿಧಾನ ಪೂರ್ಣಗೊಳ್ಳುವ ಸಮಯಕ್ಕಾಗಿ ಕಾಯುತ್ತಲೇ ಕುಳಿತಿದ್ದರು. ನಂತರ ಅಲ್ಲಿಂದ ನಗರ ಪ್ರವೇಶಿಸುತ್ತಿದ್ದಂತೆ ಸಂಚರಿಸಿದ ಮಾರ್ಗದ ಕಡೆಯಲೆಲ್ಲ ನೀರೆರಚಿ, ರಂಗೋಲಿ ಬಿಡಿಸಿ, ಮಾವಿನ ತೋರಣ ಕಟ್ಟಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಕೋಟೆ ಮಾರ್ಗ, ಕಾಮನಬಾವಿ ಬಡಾವಣೆ, ಕರುವಿನಕಟ್ಟೆ ವೃತ್ತ, ಕೂಡಲಿ ಶೃಂಗೇರಿ ಮಠ, ಸುಣ್ಣದಗುಮ್ಮಿ, ಜೋಗಿಮಟ್ಟಿ ರಸ್ತೆ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ದೇಗುಲ ಅಕ್ಕಪಕ್ಕ, ಜಟ್ಪಟ್ನಗರ, ಆಡುಮಲ್ಲೇಶ್ವರ ರಸ್ತೆ, ಜಿಲ್ಲಾ ಕ್ರೀಡಾಂಗಣ, ಪ್ರಶಾಂತ ನಗರ, ಕೆಳಗೋಟೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗುಡಿಗೌಡರು ಒಳಗೊಂಡು ಅನೇಕರು ಪೂಜೆ ಸಲ್ಲಿಸಿದರು.

ಅನೇಕ ಭಕ್ತರ ಮನೆಗಳ ಮುಂಭಾಗ ಮಹಾಮಂಗಳಾರತಿ ಪೂಜೆ ನೆರವೇರಿದ ಬಳಿಕ ಪಾನಕ, ಕೋಸಂಬರಿ, ಮಜ್ಜಿಗೆ, ಪಾಯಸ, ಪುಳಿಯೋಗರೆ, ಚಿತ್ರಾನ್ನ, ಪಲಾವ್, ಮೊಸರನ್ನ, ಕಡಲೆಕಾಳು ಉಸುಳಿ ಸೇರಿ ಇತರೆ ಪ್ರಸಾದ ವಿತರಿಸುವ ಮೂಲಕ ಭಕ್ತಿ ಸಮರ್ಪಿಸಲಾಯಿತು. ರಾತ್ರಿ 9 ಗಂಟೆ ವೇಳೆಗೆ ಅಮ್ಮನವರ ಉತ್ಸವ ಜಿಲ್ಲಾಧಿಕಾರಿ ಅವರ ಬಂಗಲೆಗೆ ಬಿಜಯಂಗೈದ ಬಳಿಕ ಕೋಟೆ ರಸ್ತೆಯ ಏಕನಾಥೇಶ್ವರಿ ಪಾದಗುಡಿಯಲ್ಲಿ ಇರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-44-1704519639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.