ಚಿತ್ರದುರ್ಗ: ವಿದ್ಯುತ್ ಕಾಮಗಾರಿ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಒಬ್ಬ ಪವರ್ ಮೆನ್, ಒಬ್ಬ ವಿದ್ಯುತ್ ಕೂಲಿ ಕಾರ್ಮಿಕ ತೀವ್ರವಾಗಿ ಗಾಯಗೊಂಡರೂ ಬೆಸ್ಕಾಂ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿ ವಿದ್ಯುತ್ ಗುತ್ತಿಗೆದಾರರು ಬುಧವಾರ ಸಿರಿಗೆರೆ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಂಗಳವಾರ ‘ಶೀಘ್ರ ಸಂಪರ್ಕ’ ಲೈನ್ ಕಾಮಗಾರಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಹರಿದ ಪರಿಣಾಮ ಪವರ್ ಮೆನ್ ರಾಜಣ್ಣ, ಕೂಲಿ ಕಾರ್ಮಿಕ ಮಹಾಂತೇಶ್ ತೀವ್ರ ಗಾಯಗೊಂಡಿದ್ದಾರೆ. ಪವರ್ ಮ್ಯಾನ್ಗೆ ಇಲಾಖೆಯಿಂದ ಚಿಕಿತ್ಸಾ ಸೌಲಭ್ಯಗಳು ದೊರೆಯುತ್ತವೆ. ಆದರೆ, ಕೂಲಿ ಕಾರ್ಮಿಕ ಮಹಾಂತೇಶ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ನೆರವಿಗೆ ಬೆಸ್ಕಾಂ ಅಧಿಕಾರಿಗಳು ನಿಲ್ಲಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕಾಮಗಾರಿ ನಡೆಸುವ ಸಂದರ್ಭದಲ್ಲಿ ನಿಯಮಾನುಸಾರ (ಎಲ್ಸಿ) ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಆದರೆ, ಆ ಮಾರ್ಗದಲ್ಲಿ ಹೇಗೆ ವಿದ್ಯುತ್ ಹರಿಯಿತು ಎಂಬುದು ಯಾರಿಗೂ ಗೊತ್ತಿಲ್ಲ. ವಿತರಣಾ ಕೇಂದ್ರದಲ್ಲಿ ಕೆಲಸ ಮಾಡುವವರ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ಹರಿದು ಇಬ್ಬರು ಗಾಯಗೊಂಡಿದ್ದಾರೆ. ಬೆಸ್ಕಾಂ ಅಧಿಕಾರಿಗಳು ತನಿಖೆ ನಡೆಸಿ ಘಟನೆಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮಹಾಂತೇಶ್ ಬಡವನಾಗಿದ್ದು, ವಿದ್ಯುತ್ ಗುತ್ತಿಗೆದಾರರ ಬಳಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಘಟನೆಯಿಂದಾಗಿ ಅವರು ಶೇ 60ರಷ್ಟು ಸುಟ್ಟ ಗಾಯಗಳಿಂದ ಅಪಾಯ ಎದುರಿಸುತ್ತಿದ್ದಾರೆ. ತೋಳು, ತೊಡೆಗಗಳು ಮುರಿದ್ದಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮುಂದೆ ಆತ ಯಾವುದೇ ರೀತಿಯ ಕೂಲಿ ಕೆಲಸ ಮಾಡಲು ಅಶಕ್ತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆ ಗುತ್ತಿಗೆದಾರರು ಹಾಗೂ ಕೂಲಿ ಕೆಲಸಗಾರರ ಸಹಾಯಕ್ಕೆ ನಿಲ್ಲಬೇಕು ಎಂದರು.

ಘಟನೆ ನಡೆದು ಒಂದು ದಿನವಾದರೂ ಬೆಸ್ಕಾಂ ಅಧಿಕಾರಿಗಳು ಸಮಸ್ಯೆಯ ಮಾಹಿತಿ ಪಡೆದಿಲ್ಲ. ಪವರ್ ಮೆನ್ ಗಾಯಗೊಂಡರೂ ಅವರ ಆರೋಗ್ಯ ಸ್ಥಿತಿ ಆಲಿಸುವ ಕೆಲಸವನ್ನೂ ಮಾಡಿಲ್ಲ. ತಮಗೆ ಸಂಬಂಧವೇ ಇಲ್ಲದಂತೆ ಅಸಡ್ಡೆ ತೋರಿಸಿದ್ದಾರೆ. ನಾವು ಪ್ರತಿಭಟನೆಯ ಹಾದಿ ಹಿಡಿದ ನಂತರವಷ್ಟೇ ಬಂದು ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳ ಇಂತಹ ನಿರ್ಲಕ್ಷ್ಯ ಮನೋಭಾವದಿಂದ ಗುತ್ತಿಗೆದಾರರು ವಿದ್ಯುತ್ ಕೆಲಸ ಮಾಡುವ ಕೆಲಸವನ್ನು ತೊರೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪವರ್ ಮ್ಯಾನ್ ಮಾಡಬೇಕಾದ ಕೆಲಸಗಳನ್ನು ಗುತ್ತಿಗೆದಾರರ ಕೂಲಿ ಕಾರ್ಮಿಕರಿಂದ ಮಾಡಿಸುತ್ತಿದ್ದಾರೆ. ಈ ಘಟನೆಯಲ್ಲೂ ಪವರ್ ಮೆನ್ ಕೆಲಸ ಮಾಡಲು ಹೋಗಿ ಮಹಾಂತೇಶ್ ತಮ್ಮ ಜೀವನ ಕಳೆದುಕೊಂಡಿದ್ದಾರೆ. ಇದನ್ನೆಲ್ಲ ಪರಿಗಣಿಸಿ ಬೆಸ್ಕಾಂ ಅಧಿಕಾರಿಗಳು ಕೂಲಿ ಕಾರ್ಮಿಕನಿಗೆ ಪರಿಹಾರ ನೀಡಬೇಕು. ಎಲ್ಲವನ್ನೂ ಗುತ್ತಿಗೆದಾರರ ಮೇಲೆ ಹಾಕುವ ಮನೋಭಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರರು, ಕಾರ್ಮಿಕರು ಈ ವೇಳೆ ಕೆಪಿಟಿಸಿಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸ್ಥಳಕ್ಕೆ ಬಂದ ಕಾರ್ಯಪಾಲಕ ಎಂಜನಿಯರ್ ನ್ಯಾಯ ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಪ್ರತಿಭಟನೆಯಲ್ಲಿ ಅನುಮತಿ ಪಡೆದ ರಾಜ್ಯ ವಿದ್ಯುತ್ ಗುತ್ತಿಗೆದಾರರ ರಾಜ್ಯ ಘಟಕದ ಅಧ್ಯಕ್ಷ ಬಿ. ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ಉಮೇಶ್, ಸಂಘಟನಾ ಕಾರ್ಯದರ್ಶಿ ಪ್ರಸನ್ನ ಕುಮಾರ್, ಉಪಾಧ್ಯಕ್ಷರಾದ ರಮೇಶ್, ನಾಗರಾಜ್, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಬಾಬು, ಮಾರುತೇಶ್ ರೆಡ್ಡಿ ಮಂಜಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-44-2019262127

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.