ಚಿತ್ರದುರ್ಗ: ‘ತಾಲ್ಲೂಕಿನ ವಡ್ಡನಹಳ್ಳಿಯ ಕೃಷಿ ಭೂಮಿಯಲ್ಲಿ ಕಲ್ಲು ಕ್ರಷರ್ಗೆ ಅನುಮತಿ ನೀಡಿರುವುದು ಖಂಡನೀಯ. ಕೂಡಲೇ ಅದನ್ನು ರದ್ದುಗೊಳಿಸಿ ಜಮೀನಿನ ಹಕ್ಕುಪತ್ರ ನೀಡಬೇಕು’ ಎಂದು ಒತ್ತಾಯಿಸಿ ಗ್ರಾಮಸ್ಥರು ಕೃಷಿ ಭೂಮಿಯಲ್ಲೇ ಪ್ರತಿಭಟನೆ ನಡೆಸಿದರು.

‘ಬಹುತೇಕ ಎಸ್ಸಿ, ಎಸ್ಟಿ ಸಮುದಾಯಗಳ ಜನರೇ ವಾಸಿಸುತ್ತಿರುವ ಗ್ರಾಮದಲ್ಲಿ ಕೃಷಿಯೇ ಆಧಾರವಾಗಿದೆ. ಸರ್ವೆ ನಂಬರ್ 145ರ ಜಮೀನಿನಲ್ಲಿ ಕೃಷಿ ಮಾಡಲಾಗಿದೆ. ಆದರೆ, ಗೋಮಾಳದ ಹೆಸರಿನಲ್ಲಿ ಕ್ರಷರ್ ನಡೆಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಸುತ್ತಲೂ ಕೃಷಿ ಭೂಮಿ ಇದ್ದು ರೈತರು ಬೆಳೆ ಬೆಳೆದಿದ್ದಾರೆ. ಇಲ್ಲಿ ಕಲ್ಲು ಕ್ರಷರ್ ಮಾಡಿದರೆ ಬಡ ರೈತರ ಬದುಕಿಗೆ ತೊಂದರೆಯಾಗಲಿದೆ. ಹೀಗಾಗಿ ಕ್ರಷರ್ ಅನುಮತಿಯನ್ನು ತಡೆ ಹಿಡಿಯಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

‘ಸ.ನಂ.145ರಲ್ಲಿ ಸಣ್ಣತಿಮ್ಮಕ್ಕ ಹಾಗೂ ಅವರ ಮಕ್ಕಳು 70 ವರ್ಷಗಳಿಂದಲೂ ಕೃಷಿ ಮಾಡುತ್ತಾ ಬರುತ್ತಿದ್ದಾರೆ. ದಶಕಗಳ ಹಿಂದೆಯೇ ಅವರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಆದರೂ ಈಗ ಗೋಮಾಳದ ಹೆಸರಿನಲ್ಲಿ ಕ್ರಷರ್ಗೆ ಅನುಮತಿ ನೀಡಿರುವುದು ಅನುಮಾನ ಮೂಡಿಸುತ್ತದೆ. ಸಾಗುವಳಿ ಚೀಟಿ ನೀಡಿರುವುದನ್ನು ಮುಚ್ಚಿಟ್ಟಿರುವ ಅಧಿಕಾರಿಗಳು ಗಣಿ ಲಾಬಿಗೆ ಮಣಿದು ಕ್ರಷರ್ಗೆ ಅನುಮತಿ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇದೇ ಸರ್ವೆ ನಂಬರ್ನಲ್ಲಿ ನೂರಾರು ಎಕರೆ ಜಮೀನು ಇದೆ. ಹಲವು ರೈತರು ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿದ್ದಾರೆ. ಮಂಜೂರಾತಿ ಕಮಿಟಿಯ ಮುಂದೆ ರೈತರ ಹೆಸರುಗಳು ಬಂದಿವೆ. ಆದರೂ ಇಲ್ಲಿಯವರೆಗೂ ಅಧಿಕಾರಿಗಳು ಮಂಜೂರಾತಿ ಮಾಡಿ ಹಕ್ಕುಪತ್ರ ನೀಡಿಲ್ಲ. ಜೊತೆಗೆ ನಮ್ಮ ಗ್ರಾಮದಲ್ಲಿ ಇಲ್ಲಿಯವರೆಗೂ ಜಮೀನು ಪೋಡಿ, ಹದ್ದುಬಸ್ತು ಮಾಡಿಲ್ಲ. ಸಾಗುವಳಿ ಚೀಟಿ ನೀಡಿರುವ ಜಮೀನಿನಲ್ಲೇ ಕ್ರಷರ್ಗೆ ಅನುಮತಿ ನೀಡಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಸದ್ಯ ಮಳೆಯಾಗಿದ್ದು ಮೆಕ್ಕೆಜೋಳ ಬಿತ್ತನೆಗೆ ಜಮೀನು ಹಸನು ಮಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿಯೇ ಕ್ರಷರ್ ಮಾಲೀಕರು ಜಮೀನಿನಲ್ಲಿ ಟ್ರಂಚ್ ತೋಡಿದ್ದು ಜಲ್ಲಿಕಲ್ಲುಗಳನ್ನು ತಂದು ಹಾಕಿದ್ದಾರೆ. 10 ಅಡಿಗೂ ಆಳವಾದ ಕಾಲುವೆಗಳನ್ನು ತೋಡಿದ್ದಾರೆ. ಕ್ರಷರ್ ಯಂತ್ರೋಪಕರಣಗಳನ್ನು ಅಳವಡಿಸಲು ಸಿದ್ಧತೆ ನಡೆಸಿದ್ದಾರೆ. ಕೃಷಿ ಭೂಮಿಯಲ್ಲಿ ಕ್ರಷರ್ ಹಾಕಲು ನಾವು ಅವಕಾಶ ನೀಡುವುದಿಲ್ಲ. ‘ಪ್ರಾಣ ಬೇಕಾದರೂ ಬಿಡುತ್ತೇವೆ, ಕ್ರಷರ್ಗೆ ಕೃಷಿ ಭೂಮಿ ಬಿಡುವುದಿಲ್ಲ’ ಎಂದು ಘೋಷಣೆ ಕೂಗಿದರು.

‘ಇಲ್ಲಿ ಕ್ರಷರ್ ಚಟುವಟಿಕೆ ಆರಂಭವಾದರೆ ವಡ್ಡನಹಳ್ಳಿ ಮಾತ್ರವಲ್ಲದೇ ತಿಮ್ಮಪ್ಪನಹಳ್ಳಿ, ಆಯಿತೋಳು, ಪಾಪೇನಹಳ್ಳಿ, ಕುರುಬರಹಟ್ಟಿ ಮುಂತಾದ ಗ್ರಾಮಗಳ ರೈತರಿಗೂ ಸಮಸ್ಯೆಯಾಗಲಿದೆ. ಕಲ್ಲಿನ ದೂಳಿನಿಂದ ಸಾವಿರಾರು ಎಕರೆ ಕೃಷಿ ಭೂಮಿ ನಾಶವಾಗಲಿದೆ. ಹತ್ತಿರದಲ್ಲೇ ಕುರಿ, ಕೋಳಿ ಫಾರಂಗಳಿವೆ. ಸಮೀಪದಲ್ಲೇ ಕೆರೆ, ಕಟ್ಟೆ, ಬಾವಿಗಳಿದ್ದು ಅವುಗಳ ಮೇಲೂ ಪರಿಣಾಮ ಬೀರಲಿದೆ. ಅಂತರ್ಜಲ ಕೂಡ ಕಲುಷಿತಗೊಳ್ಳಲಿದೆ. ಜೊತೆಯಲ್ಲೇ ದೇವಾಲಯಗಳೂ ಇದ್ದು ಭಕ್ತರಿಗೆ ತೊಂದರೆಯಾಗಲಿದೆ. ಹೀಗಾಗಿ ಕ್ರಷರ್ಗೆ ಅನುಮತಿ ನೀಡಿರುವುದನ್ನು ಜಿಲ್ಲಾಧಿಕಾರಿ ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಇಲ್ಲಿ ಕ್ರಷರ್ ಹಾಕುವ ಸಂಬಂಧ 2023ರಲ್ಲೇ ಜಮೀನು ಸಮೀಕ್ಷೆ ಮಾಡಲಾಗಿತ್ತು. ಆಗಿನಿಂದಲೂ ನಾವು ಇದರ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಆಗಲೇ ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಇಲ್ಲಿ ಯಾವುದೇ ಕಾರಣಕ್ಕೂ ಕ್ರಷರ್ಗೆ ಅನುಮತಿ ನೀಡಬಾರದೆಂದು ಒತ್ತಾಯ ಮಾಡಿದ್ದೆವು. ಆದರೂ ಅಧಿಕಾರಿಗಳು ಕ್ರಷರ್ ಲಾಬಿಗೆ ಮಣಿದು ಅನುಮತಿ ನೀಡಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘60–70 ವರ್ಷದಿಂದ ನಾವು ಜಮೀನು ಅನುಭವದಲ್ಲಿದ್ದೇವೆ. ಕಲ್ಲು, ಮಣ್ಣು ಗುಂಡಿಗಳಿಂದ ಕೂಡಿದ್ದ ಭೂಮಿಯನ್ನು ಮಟ್ಟ ಮಾಡಿಸಿದ್ದೇವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಜಮೀನಿನಲ್ಲಿ ಗಣಿ ಚಟುವಟಿಕೆ ನಡೆಸಿದರೆ ಸುಮ್ಮನಿರುವುದಿಲ್ಲ. ಗಣಿ ಇಲಾಖೆ, ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ, ಉಪವಾಸ ಕೂರುತ್ತೇವೆ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ರುದ್ರಪ್ಪ, ಬೋರಪ್ಪ, ಅಣ್ಣಪ್ಪ, ಲಲಿತಮ್ಮ, ಲಕ್ಷ್ಮಮ್ಮ, ಶಾರದಮ್ಮ, ಇಜಾಸ್ ಖಾನ್, ಮಹಾಂತೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-44-1194230174

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.